ವಿದ್ಯಾರ್ಥಿನಿಗೆ ಕುಟುಂಬಕ್ಕೆ ಆರ್ಥಿಕ ನೆರವು

13092022 Devadurga student familiy
Published on

ದೇವದುರ್ಗ: ರೈಲ್ವೆ ಅಪಘಾತದಲ್ಲಿ ಕಾಲ ಕಳೆದುಕೊಂಡ ತಾಲೂಕಿನ ಹೇಮನೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ 8ನೇ ತರಗತಿ ವಿದ್ಯಾರ್ಥಿನಿ ಶ್ರೀದೇವಿ ಹನುಮಂತರಾಯ ಕುಟುಂಬಕ್ಕೆ ಗ್ರಾಮದ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಕರು ಇತ್ತೀಚೆಗೆ ಆರ್ಥಿಕ ಸಹಾಯ ನೀಡಿದರು.

ಶ್ರೀದೇವಿ ಕುಟುಂಬ ಸಮೇತ ತಿರುಪತಿಗೆ ತೆರಳುತ್ತಿರುವ ವೇಳೆ ಆ.19ರಂದು ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ರೈಲು ಬರುವ ವೇಳೆ ಕಾಲು ಜಾರಿ ಟ್ರ್ಯಾಕ್‌ಗೆ ಬಿದ್ದಿದ್ದು ಒಂದು ಕಾಲು ಸಂಪೂರ್ಣ ಕಟ್ ಆಗಿ, ಇನ್ನೊಂದು ಕಾಲು ತೀವ್ರವಾಗಿ ಗಾಯವಾಗಿದೆ. ಇದರಿಂದ ವಿದ್ಯಾರ್ಥಿನಿ ತೀವ್ರ ಸಮಸ್ಯೆ ಎದುರಿಸುತ್ತಿದ್ದು, ಬಡ ಕುಟುಂಬ ಆಸ್ಪತ್ರೆ ವೆಚ್ಚ ಭರಿಸಲೂ ಅಸಶಕ್ತವಾಗಿದೆ. ಈ ಹಿನ್ನೆಲೆ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಣ ಸಂಗ್ರಹಿಸಿ 22ಸಾವಿರ ರೂ. ಕುಟುಂಬ ಸದಸ್ಯರಿಗೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net