ಗುಳೆಹೋಗುವುದು ಬಿಡಿ ಖಾತ್ರಿ ಕೆಲಸ ಮಾಡಿ

Untitled design (46)
ದೇವದುರ್ಗ ತಾಲೂಕು ಇಂಗಳದಾಳ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಾರಾಯಣಪುರ ಬಲದಂಡೆ ನಾಲೆ ಉಪಕಾಲುವೆಯಲ್ಲಿ ಹೂಳು ಎತ್ತುತ್ತಿರುವ ಕೂಲಿಕಾರರು.
Published on

ದೇವದುರ್ಗ: ಗ್ರಾಮೀಣ ಭಾಗದ ಜನರು ಕೆಲಸ ಅರಸಿ ಮಹಾನಗರಳಿಗೆ ಗುಳೆ ಹೋಗುವುದನ್ನು ತಡೆಯಲು ಸರ್ಕಾರ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಿದೆ. ಖಾತ್ರಿಯಡಿ 100 ದಿನ ಕೆಲಸ ನೀಡುತ್ತಿದ್ದು, ಕೂಲಿಕಾರರು ಗುಳೆ ಹೋಗುವುದನ್ನು ಬಿಟ್ಟು ನರೇಗಾ ಕೆಲಸ ಮಾಡಬೇಕು ಎಂದು ಶಾವಂತಗೇರಾ ಪಿಡಿಒ ಶಂಶುದ್ದೀನ್ ಹೇಳಿದರು.

ತಾಲೂಕಿನ ಶಾವಂತಗೇರಾ ಗ್ರಾಪಂ ವ್ಯಾಪ್ತಿಯ ಇಂಗಳದಾಳ ಗ್ರಾಮದಲ್ಲಿ ಎನ್‌ಆರ್‌ಬಿಸಿ ನಾಲೆ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು. ನರೇಗಾ ಯೋಜನೆ ಕೆಲಸಕ್ಕಾಗಿ ಗ್ರಾಪಂಗೆ ಅರ್ಜಿ ಸಲ್ಲಿಸುವ ಮೂಲಕ ಖಾತ್ರಿ ಕೆಲಸ ಪಡೆಯಬಹುದು ಎಂದರು.
ಮೇ 7 ರಂದು ಲೋಕಸಭೆ ಚುನಾವಣೆಗೆ ಮತದಾನ ನಡೆಯಲಿದ್ದು, ಕೂಲಿಕಾರರು ತಪ್ಪದೆ ಮತದಾನ ಮಾಡಬೇಕು. ಮತದಾನವೇ ಪ್ರಜಾಪ್ರಭುತ್ವದ ಭದ್ರ ಬುನಾದಿಯಾಗಿದೆ. ಸಂವಿಧಾನ 18 ವರ್ಷ ತುಂಬಿದ ಪ್ರತಿಯೊಬ್ಬರಿಗೂ ಮತದಾನ ಹಕ್ಕು ನೀಡಿದ್ದು, ಇದನ್ನು ಸದ್ಬಳಕೆ ಮಾಡಿಕೊಂಡು ಹಕ್ಕು ಚಲಾಯಿಸಬೇಕು ಎಂದರು.

ಮುಖಂಡರಾದ ಬೂದಯ್ಯಸ್ವಾಮಿ, ಪ್ರಭಾಕರಸ್ವಾಮಿ, ಕೂಲಿಕಾರರಾದ ಬಸಮ್ಮ, ಮಲ್ಲಯ್ಯ ಪೂಜಾರಿ, ಶರಣಪ್ಪ ಮಡಿವಾಳ, ಕಲ್ಪಪ್ಪ ನಾಯಕ, ಬಸಲಿಂಗಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net