ಅಂತಾರಾಜ್ಯ ವಲಸೆ ಕಾರ್ಮಿಕರ ಕಾಯ್ದೆ ಬಲಪಡಿಸಿ

Untitled design (7)
ದೇವದುರ್ಗದಲ್ಲಿ ಉಪತಹಸೀಲ್ದಾರ್ ವೆಂಕಟೇಶಗೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಒಕ್ಕೂಟ ಮನವಿ ಸಲ್ಲಿಸಿತು. ಮುಖಂಡರಾದ ಶಬ್ಬೀರ್ ಜಾಲಹಳ್ಳಿ, ಪಿಡ್ಡಪ ನಾಯಕ, ಯುಸೂಫ್ ಸಾಬ್ ಗ್ವಾಡೆಕರ್, ಶಾಂತಪ್ಪ ಮೇಸ್ತ್ರಿ, ಖಾಜಾ ಪಾಷಾ ಇಡಪನೂರು, ಕುಬೇಂದ್ರ ಕರಿಗಾರ್, ಹುಸೇನ್ ಸಾಬ್ ಗುಂಡಗುರ್ತಿ, ರಮೇಶ ಇದ್ದರು.
Published on

ದೇವದುರ್ಗ: ಕಟ್ಟಡ ನಿರ್ಮಾಣ ಸಾಮಗ್ರಿ ಹಾಗೂ ಸಲಕರಣೆ ಮೇಲೆ ಜಿಎಸ್‌ಟಿ ವಿಧಿಸದಿರಲು ಒತ್ತಾಯಿಸಿ ಪಟ್ಟಣದ ಮಿನಿವಿಧಾನಸೌಧದಲ್ಲಿ ಉಪತಹಸೀಲ್ದಾರ್ ವೆಂಕಟೇಶಗೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಒಕ್ಕೂಟ ಬುಧವಾರ ಮನವಿ ಸಲ್ಲಿಸಿತು.

ಕಟ್ಟಡ ಕಾರ್ಮಿಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಹಲವು ದಿನಗಳಿಂದ ಹೋರಾಟ ಮಾಡಿದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸ್ಪಂದನೆ ಮಾಡುತ್ತಿಲ್ಲ ಎಂದು ದೂರಿದರು.

ಕೂಡಲೇ ಅಂತಾರಾಜ್ಯ ವಲಸೆ ಕಾರ್ಮಿಕರ ಕಾಯ್ದೆ 1979 ಬಲಪಡಿಸಬೇಕು. ಕಟ್ಟಡ ಕಾರ್ಮಿಕರ ಕೇಂದ್ರ ಸಲಹಾ ಮಂಡಳಿ ಸ್ಥಾಪಿಸಬೇಕು. ಕಲ್ಯಾಣ ನಿಧಿ ಬೇರೆ ಉದ್ದೇಶಕ್ಕೆ ವಿನಿಯೋಗಿಸಬಾರದು. ನಿರಂತರ ಪಿಂಚಣಿ ಸೌಲಭ್ಯಕ್ಕೆ ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡಬೇಕು. ದುಡಿವ ಮಹಿಳೆಯರಿಗೆ ಸಮಾನಕೂಲಿ ಜತೆಗೆ ಭದ್ರತೆ ಒದಗಿಸಬೇಕು. ನೈಜ ಕಾರ್ಮಿಕರಿಗೆ ನೋಂದಣಿ ಕಾರ್ಡ್ ವಿತರಿಸಬೇಕು. ಬಾಕಿ ಇರುವ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಟೆಂಡರ್ ಆಧಾರಿತ ಎಲ್ಲ ಖರೀದಿ ವ್ಯವಹಾರ ನಿಲ್ಲಿಸಬೇಕು. ಶೈಕ್ಷಣಿಕ ಸಹಾಯಧನ ಕಡಿತ ಮಾಡಿರುವ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net