ಸೌಹಾರ್ದತೆಗೆ ಭಾರತ ಮಾದರಿ; ಶಾಸಕ ಕೆ.ಶಿವನಗೌಡ ನಾಯಕ ಹೇಳಿಕೆ ಇಫ್ತಿಯಾರ್ ಕೂಟ ಆಯೋಜನೆ

020522 Devadurga Iftiyar Kuta Shivanagouda Nayaka
ದೇವದುರ್ಗದಲ್ಲಿ ಶಾಸಕ ಕೆ.ಶಿವನಗೌಡ ನಾಯಕ ಭಾನುವಾರ ಇಫ್ತಿಯಾರ್ ಕೂಟ ಆಯೋಜಿಸಿದ್ದರು.
Published on

ದೇವದುರ್ಗ: ಭಾರತ ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ನಾಡು. ಶಾಂತಿ, ಸೌಹಾರ್ದತೆಗೆ ಇತರ ದೇಶಗಳಿಗೆ ಮಾದರಿಯಾಗಿದೆ. ಸರ್ವಧರ್ಮದವರೂ ಸಹಬಾಳ್ವೆ ನಡೆಸುವ ಅವಕಾಶವನ್ನು ಸಂವಿಧಾನ ನೀಡಿದೆ ಎಂದು ಶಾಸಕ ಕೆ.ಶಿವನಗೌಡ ನಾಯಕ ಹೇಳಿದರು.

ಪಟ್ಟಣದ ಶಾಸಕರ ಕಚೇರಿ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಇಫ್ತಿಯಾರ್ ಕೂಟದಲ್ಲಿ ಮಾತನಾಡಿದರು. ದೇಶದಲ್ಲಿ ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಸಿಖ್, ಪಾರ್ಸಿ ಸೇರಿ ವಿವಿಧ ಧರ್ಮಗಳ ಜನರು ಸಾವಿರಾರು ವರ್ಷಗಳಿಂದ ಶಾಂತಿ, ಸೌಹಾರ್ದತೆಯಿಂದ ಜೀವನ ನಡೆಸಿದ್ದಾರೆ. ಹಿರಿಯರ ಆದರ್ಶ ಜೀವನ ನಮಗೆ ಮಾದರಿಯಾಗಿದೆ. ಹಬ್ಬ-ಹರಿದಿನಗಳು ಶಾಂತಿಯ ಸಂದೇಶ ನೀಡುವ ಜತೆಗೆ ಜನರ ಮಧ್ಯೆ ಸಾಮರಸ್ಯ ಬಿತ್ತುತ್ತವೆ. ಪ್ರತಿಯೊಬ್ಬರೂ ಶಾಂತರೀತಿಯಲ್ಲಿ ಹಬ್ಬ ಆಚರಿಸಬೇಕು ಎಂದರು.

ಕನ್ನಡ ವಿವಿ ಸಿಂಡಿಕೇಟ್ ಸದಸ್ಯ ನಾಗರಾಜ ಅಕ್ಕರಕಿ, ಸಿಪಿಐ ಆರ್.ಎಂ.ನದಾಫ್, ಗಬ್ಬೂರು ಪಿಎಸ್‌ಐ ಸಣ್ಣವೀರೇಶ, ಪ್ರಮುಖರಾದ ಶರಣಗೌಡ ಸುಂಕೇಶ್ವರಹಾಳ, ಬಸವರಾಜ ಕೊಪ್ಪರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net