ಹಿಂದು ಮುಖಂಡರ ಮೇಲಿನ ದೌರ್ಜನ್ಯಕ್ಕೆ ಖಂಡನೆ, ದೇವದುರ್ಗ ತಹಸೀಲ್ದಾರ್ ಸಂತೋಷಿರಾಣಿ ಅಮಾನತಿಗೆ ಆಗ್ರಹ

05092020 Manvi Privete school teacher
Published on

ದೇವದುರ್ಗ: ಪಟ್ಟಣದ ಕೆಇಬಿ ರಸ್ತೆಯಲ್ಲಿ ಹಿಂದು ಮಹಾಗಣಪ ಸಂಘಟನೆ ಪ್ರತಿಷ್ಠಾಪಿಸಿದ ಗಣೇಶ ವಿಗ್ರಹ ಸ್ಥಳದಲ್ಲಿ ಹಿಂದು ಕಾರ್ಯಕರ್ತರ ಮೇಲೆ ಪ್ರಭಾರ ತಹಸೀಲ್ದಾರ್ ಸಂತೋಷಿರಾಣಿ ನಡೆಸಿದ ದೌರ್ಜನ್ಯ ಖಂಡಿಸಿ ಮಿನವಿಧಾನಸೌಧ ಮುಂದೆ ತಹಸೀಲ್ದಾರ್ ಮಧುರಾಜ್ ಯಾಳಗಿಗೆ ಹಿಂದು ಜಾಗರಣ ವೇದಿಕೆ ಮನವಿ ಸಲ್ಲಿಸಿತು.

ಕೂಡಲೇ ಹಿಂದು ವಿರೋಧಿ ಮನಸ್ಥಿತಿ ಇರುವ ಹಾಗೂ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಿದ ಪ್ರಭಾರ ತಹಸೀಲ್ದಾರ್ ಸಂತೋಷಿ ರಾಣಿಯನ್ನು ಅಮಾನತು ಮಾಡಬೇಕು. ಸುಳ್ಳು ಕೇಸ್ ವಾಪಸ್ ಪಡೆಯಬೇಕು. ಮುಂದೆ ಇಂಥ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಪ್ರಮುಖರಾದ ಕಾರ್ತಿಕ ಸಿಂಧೆ, ತಾಲೂಕು ಸಹ ಕಾರ್ಯದರ್ಶಿ ಸೂಗಯ್ಯ ಸ್ವಾಮಿ, ಸಂಪರ್ಕ ಪ್ರಮುಖ ಗುರುನಾಥ ರೆಡ್ಡಿ ಮುದ್ದುರಡ್ಡಿ, ಶ್ರೀಕಂಠಯ್ಯಸ್ವಾಮಿ, ಕೇತೇಶ್ವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net