ಎತ್ತಿನಬಂಡಿಯಲ್ಲಿ ಗಣೇಶ ವಿಸರ್ಜನೆ

03092022 Devadurga ganesh
Published on

ದೇವದುರ್ಗ: ಜಾಲಹಳ್ಳಿ ಪ್ಯಾಟಿ ಬಸವಣ್ಣ ದೇವಸ್ಥಾನ ಆವರಣದಲ್ಲಿ ಪರಿಸರ ಸ್ನೇಹಿ ಗಜಾನನ ಮಿತ್ರ ಮಂಡಳಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮಾಡುವ ಮೂಲಕ ಶುಕ್ರವಾರ ವಿಸರ್ಜನೆ ಮಾಡಲಾಯಿತು. ಎತ್ತಿನ ಬಂಡಿಯನ್ನು ವಿಶೇಷವಾಗಿ ಸಿಂಗರಿಸಲಾಗಿತ್ತು. ಮಣ್ಣಿನಿಂದ ತಯಾರಿಸಿದ್ದ ಗಣೇಶ ಮೂರ್ತಿಯನ್ನು ಬಸವಣ್ಣ ದೇವಸ್ಥಾನದಿಂದ ಶಹನಾಯಿ, ಕರಡಿ ಮಜಲು ಮೇಳದೊಂದಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net