ಗಬ್ಬೂರು ಜಾತ್ರೆಯಲ್ಲಿ ಸ್ವಚ್ಛತಾ ಅಭಿಯಾನ

110222 Gabburu Fair Cleanup
ಗಬ್ಬೂರು ಶ್ರೀಬೂದಿಬಸವೇಶ್ವರ ದೇವಸ್ಥಾನ ಆವರಣದಲ್ಲಿ ಯುವ ಬ್ರಿಗೇಡ್ ಸಂಘಟನೆ ಸ್ವಚ್ಛತಾ ಅಭಿಯಾನ ಕೈಗೊಂಡಿತು.
Published on

ದೇವದುರ್ಗ: ಗಬ್ಬೂರು ಶ್ರೀ ಬೂದಿಬಸವೇಶ್ವರ ಸಂಸ್ಥಾನ ಮಠದಲ್ಲಿ ಗುರುವಾರ 220 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಿದ್ದ ಹಿನ್ನೆಲೆಯಲ್ಲಿ ಯುವ ಬ್ರಿಗೇಡ್ ಸಂಘಟನೆಯಿಂದ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಸ್ವಚ್ಛತೆ ಅಭಿಯಾನ ಕೈಗೊಳ್ಳಲಾಯಿತು.

ಬ್ರಿಗೇಡ್‌ನ ಮಾರ್ಗದರ್ಶಕ ಡಾ.ಅಶೋಕ ರಾಜಳ್ಳಿ ಮಾತನಾಡಿ, ಈ ವರೆಗೆ 121 ಭಾನುವಾರ ಸ್ವಚ್ಛತೆ ಕೈಗೊಂಡಿದ್ದು, 122ನೇ ಭಾನುವಾರ ಬದಲಾಗಿ, ಬಡವರ ಅನುಕೂಲಕ್ಕಾಗಿ ಶ್ರೀಮಠದಲ್ಲಿ ಸಾಮೂಹಿಕ ವಿವಾಹ ಆಯೋಜಿಸಿದ್ದರಿಂದ ಆವರಣದಲ್ಲಿ ಸ್ವಚ್ಛತೆ ಕೈಗೊಳ್ಳಲಾಗಿದೆ ಎಂದರು. ಶ್ರೀಮಠದ ಪೀಠಾಧಿಪತಿ ಶ್ರೀ ಬೂದಿಬಸವ ಶಿವಾಚಾರ್ಯ ಸ್ವಾಮೀಜಿ, ಯುವ ಬ್ರಿಗೇಡ್ ಮಾರ್ಗದರ್ಶಕರಾದ ಷಣ್ಮುಖ ಹೂಗಾರ್, ರಾಜನಗೌಡ, ರವಿ ಶುಕ್ಲ, ವೆಂಕಟೇಶ್ ಜೋಶಿ, ಸಿದ್ದಯ್ಯ ಸ್ವಾಮಿ, ಜಿಲ್ಲಾ ಸಹ ಸಂಚಾಲಕ ಉದಯ್ ಕುಮಾರ್, ಹೋಬಳಿ ಸಂಚಾಲಕ ಚನ್ನು ಚಿಕ್ಕಮಠ, ಸಹಸಂಚಾಲಕ ವೀರೇಶ್, ನಾಗನಗೌಡ, ಶರಣಬಸವ, ಭೀಮರೆಡ್ಡಿ, ಆಂಜನೇಯ ಬಾಗ್ಲಿ, ಶಿವಕುಮಾರ್ ಯಾದವ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net