ಸರಳ ವಿವಾಹದಿಂದ ಬಡತನ ದೂರ; ಮಾಜಿ ಸಂಸದ ಬಿ.ವಿ.ನಾಯಕ ಅಭಿಮತ

22052022 Devadurga Mass wedding
Published on

ದಾಂಪತ್ಯ ಜೀವನಕ್ಕೆ ಕಾಲಿಟ್ಟ 9 ಜೋಡಿ

ದೇವದುರ್ಗ: ಮಠ ಮಾನ್ಯಗಳು, ದೇವಸ್ಥಾನಗಳು ಆಯೋಜಿಸುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮದುವೆ ಆಗುವುದರಿಂದ ದುಂದು ವೆಚ್ಚಕ್ಕೆ ಕಡಿವಾಣ ಬೀಳಲಿದೆ. ಸರಳ ವಿವಾಹದಿಂದ ಬಡತನ ದೂರು ಮಾಡಬಹುದು ಎಂದು ಮಾಜಿ ಸಂಸದ ಬಿ.ವಿ.ನಾಯಕ ಹೇಳಿದರು.

ತಾಲೂಕಿನ ಕರಿಗುಡ್ಡ ಗ್ರಾಮದ ಶ್ರೀಗುಡ್ಡದ ಮಲ್ಲಯ್ಯ ದೇವಸ್ಥಾನದಲ್ಲಿ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಭಾನುವಾರ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ ಮಾತನಾಡಿದರು. ಕರಿಗುಡ್ಡದಲ್ಲಿ ಪ್ರಥಮ ಬಾರಿಗೆ ಸಾಮಾಜಿಕ ಕಾರ್ಯಕ್ರಮ ಆಗುತ್ತಿರುವುದು ಶ್ಲಾಘನೀಯ ಎಂದರು.

ಸಮಾಜದಲ್ಲಿ ಬಡತನ ನಿವಾರಣೆಗೆ ಇಂಥ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಗುಡ್ಡದ ಮಲ್ಲಯ್ಯನ ಆಶೀರ್ವಾದ ವಧು-ವರರ ಮೇಲೆ ಇರಲಿ. ಈ ದೇವಸ್ಥಾನದ ಮೂಲಕ ಇನ್ನು ಹೆಚ್ಚಿನ ಕಾರ್ಯಕ್ರಮ ನಡೆಯಲಿ ಎಂದು ಹಾರೈಸಿದರು.

ಸಮಾಜದಲ್ಲಿ ಎಲ್ಲೂರ ಸಮಾನತೆಯಿಂದ ಬಾಳಬೇಕಿದೆ. ಸಹಬಾಳ್ವೆಯೇ ಭಾರತದ ಮೂಲಮಂತ್ರ. ಇಲ್ಲಿ ವಿವಿಧ ಸಮುದಾಯದ ಮುಖಂಡರು ಸೇರಿ ಇಂಥ ಕಾರ್ಯಕ್ರಮ ಆಯೋಜಿಸಿದ್ದು ಸಮಾಜಕ್ಕೆ ಮಾದರಿ. ಸಾಲ ಮಾಡಿ ದುಂದುವೆಚ್ಚದ ಮದುವೆ ಆಗುವುದರಿಂದ ಬಡತನ ಹೆಚ್ಚಾಗುವ ಜತೆಗೆ ಸಾಲದ ಭಾರ ಸುಖ-ಸಂಸಾರಕ್ಕೆ ಸಮಸ್ಯೆಯಾಗಲಿದೆ. ಈ ಹಿನ್ನೆಲೆಯಲ್ಲಿ ಬಡವರು ಹಾಗೂ ಉಳ್ಳವರು ಇಬ್ಬರೂ ಸರಳವಾಗಿ ಮದುವೆಯಾಗಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net