

ದೇವದುರ್ಗ: ಕ್ಯಾನ್ಸರ್, ಹೃದಯ ರೋಗ ಸೇರಿ ಮಾರಕ ಕಾಯಿಲೆಗಳು ಬಡವರ ಜೀವನವನ್ನೇ ನರಕಕ್ಕೆ ದೂಡುತ್ತವೆ. ಇದರಿಂದ ಹೊರಬರಲು ಆರೋಗ್ಯ ತಪಾಸಣೆ ಶಿಬಿರಗಳು ಜನರಿಗೆ ಆಶಾಕಿರಣವಾಗಲಿವೆ ಎಂದು ಮಾಜಿ ಸಂಸದ ಬಿ.ವಿ.ನಾಯಕ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪರ್ವತರೆಡ್ಡಿ ಮಾಲಿಪಾಟೀಲ್ ಫೌಂಡೇಶನ್‌ನಿಂದ ಆಯೋಜಿಸಿದ್ದ ಕ್ಯಾನ್ಸರ್ ಹಾಗೂ ಹೃದಯ ರೋಗಿಗಳಿಗೆ ಸ್ಕ್ಯಾನಿಂಗ್, ಉಚಿತ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು. ಬೆಂಗಳೂರಿನ ರಾಮಯ್ಯ ಆಸ್ಪತ್ರೆ ವೈದ್ಯರು ಶಿಬಿರ ಭಾಗವಹಿಸಿದ್ದು ಸಂತಸ ತಂದಿದೆ ಎಂದರು.
ಶಿಬಿರದಲ್ಲಿ 153 ವೃದ್ಧರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿರುವುದು ಶ್ಲಾಘನೀಯ. ಇಂಥ ಶಿಬಿರಗಳು ಹೆಚ್ಚಾಗಿ ಆಯೋಜನೆ ಮಾಡಿ, ಬಡವರಿಗೆ ಅನುಕೂಲ ಕಲ್ಪಿಸಬೇಕು ಎಂದರು. ವೈದ್ಯಾಧಿಕಾರಿ ಡಾ.ಸಂತೋಷಕುಮಾರ ಬಂಡೆಗುಡ್ಡ ಮಾತನಾಡಿದರು.
ಪರ್ವತರೆಡ್ಡಿ ಮಾಲಿಪಾಟೀಲ್ ಫೌಂಡೇಶನ್ ಅಧ್ಯಕ್ಷ ಶರಣಗೌಡ ಮಾಲಿಪಾಟೀಲ್, ಶಿಬಿರ ಸಂಯೋಜಕ ಬಸ್ಸಪ್ಪ ಪಟ್ಟೇದ್, ಮುಖಂಡರಾದ ಮಲ್ಲಿಕಾರ್ಜುನ ಪಾಟೀಲ್ ಅಂಚೆಸೂಗೂರು, ಅಮರೇಶ ಬಲ್ಲಿದವ, ಗಂಗಪ್ಪಯ್ಯ ಮಾನಸಗಲ್, ದೇವಿಂದ್ರಪ್ಪ ನಾಯ್ಕ ಸಾಸ್ವಿಗೇರಾ, ನಾಗರಾಜ ಗೂಗಿ, ಶಿವರಾಜ ರುದ್ರಾಕ್ಷಿ, ಚನ್ನವೀರಯ್ಯ ಹಿರೇಮಠ, ಅಯ್ಯನಗೌಡ ನಾಗಡದಿನ್ನಿ, ಶಿವಣ್ಣ ತಾತ ಗಣಜಲಿ, ಬಸವರಾಜ ಬ್ಯಾಗವಾಟ ಇದ್ದರು.