ಶಿಕ್ಷಣದಿಂದ ಸಮೃದ್ಧ ಸಮಾಜ - ಬಿಇಒ ಡಾ.ಆರ್.ಇಂದಿರಾ ಅಭಿಮತ

171222 Inauguration of school building in Karadigudda
ದೇವದುರ್ಗ ತಾಲೂಕು ಕರಡಿಗುಡ್ಡದಲ್ಲಿ ಸರ್ಕಾರಿ ಶಾಲಾ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಲೆಗಾಗಿ ಹೋರಾಟ ಮಾಡಿದ ನರಸಪ್ಪ ಎನ್.ಗಣೇಕಲ್ ಮತ್ತು ಹೋರಾಟಗಾರರನ್ನು ಸನ್ಮಾನಿಸಲಾಯಿತು.
Published on

ದೇವದುರ್ಗ: ಸಾಧನೆಗೆ ಶಿಕ್ಷಣವೇ ಅಸ್ತ್ರ. ಪ್ರತಿಯೊಬ್ಬರೂ ಅಕ್ಷರ ಜ್ಞಾನ ಪಡೆಯಬೇಕು. ಶಿಕ್ಷಣದಿಂದ ಸಮೃದ್ಧಿ ಸಮಾಜ ನಿರ್ಮಾಣ ಮಾಡಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಆರ್.ಇಂದಿರಾ ಹೇಳಿದರು.

ಕರಡಿಗುಡ್ಡ ಗ್ರಾಮದದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ಇಂದು ಸರ್ವರಿಗೂ ಶಿಕ್ಷಣ ಕೊಡುವ ದೃಷ್ಟಿಯಿಂದ ಸರ್ಕಾರ ಗ್ರಾಮೀಣ ಭಾಗದಲ್ಲಿ ಶಾಲೆಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಮುಂದಾಗಿದೆ. ಹೊಸ ಕಟ್ಟಡ ನಿರ್ಮಾಣ, ಶಿಕ್ಷಕರ ನೇಮಕ, ಅಗತ್ಯ ಸೌಲಭ್ಯ ಕಲ್ಪಿಸಿ ಬಡವರ ಮಕ್ಕಳೂ ಉತ್ತಮ ಶಿಕ್ಷಣ ಪಡೆಯಲು ಅನುಕೂಲ ಮಾಡಿಕೊಡಲಾಗಿದೆ.

ಅಲ್ಲದೆ ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಶಿಕ್ಷಣ ಇಲಾಖೆ ನಾನಾ ಯೋಜನೆ ಜಾರಿಗೊಳಿಸಿದ್ದು, ಮಧ್ಯಾಹ್ನದ ಬಿಸಿಯೂಟ ಯೋಜನೆ, ಸೈಕಲ್ ಸೇರಿ ಅಗತ್ಯ ಕಲಿಕಾ ಸಾಮಗ್ರಿ ಸಾಮಗ್ರಿ ನೀಡಲಾಗುತ್ತಿದೆ. ಮಹಿಳೆಯರಿಗೆ ವಿದ್ಯಾರ್ಥಿ ವೇತನ ಸೇರಿ ಹಲವು ಸೌಲಭ್ಯ ನೀಡಿದ್ದು, ಪಾಲಕರು ತಮ್ಮ ಮಕ್ಕಳಿಗೆ ತಪ್ಪದೆ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net