ಜಾಲಹಳ್ಳಿ ಆಸ್ಪತ್ರೆಗೆ ತಜ್ಞ ವೈದ್ಯರ ನೇಮಿಸಿ, ಡಿವೈಎಸ್‌ಐ ಸಂಘಟನೆಯಿಂದ ಧರಣಿ

HOSPITAL
ದೇವದುರ್ಗ ತಾಲೂಕು ಜಾಲಹಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಜ್ಞ ವೈದ್ಯರನ್ನು ನೇಮಿಸುವಂತೆ ಆಗ್ರಹಿಸಿ ಆಸ್ಪತ್ರೆ ಮುಂದೆ ಡಿವೈಎಫ್‌ಐ ಧರಣಿ ನಡೆಸಿತು. ತಾಲೂಕು ಅಧ್ಯಕ್ಷ ರಿಯಾಜ್ ಆರ್ತಿ, ಕಾರ್ಯದರ್ಶಿ ರಾಜು ನಾಯಕ, ಮುಖಂಡರಾದ ನರಸಣ್ಣ ನಾಯಕ, ಮೌನೇಶ ದಾಸರ್, ರಂಗನಾಥ ನಾಯಕ ಇತರರಿದ್ದರು.
Published on

ದೇವದುರ್ಗ: ತಾಲೂಕಿನ ಜಾಲಹಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಜ್ಞ ವೈದ್ಯರನ್ನು ನೇಮಿಸುವಂತೆ ಒತ್ತಾಯಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವೈಎಫ್‌ಐ) ಸಂಘಟನೆ ಆಸ್ಪತ್ರೆ ಆವರಣದಲ್ಲಿ ಗುರುವಾರ ಧರಣಿ ನಡೆಸಿತು.

ಜಾಲಹಳ್ಳಿ ತಾಲೂಕಿನಲ್ಲೇ ಅತಿಹೆಚ್ಚು 30ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣ. ಆದರೆ, ಗ್ರಾಮೀಣ ಪ್ರದೇಶದಲ್ಲಿರುವ ಉಪಕೇಂದ್ರದಲ್ಲಿ ಸಿಗುವ ಸಣ್ಣ ಸೌಲಭ್ಯವೂ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಿಗುವುದಿಲ್ಲ. ಆಸ್ಪತ್ರೆಯಲ್ಲಿ 16 ಸಿಬ್ಬಂದಿ ಮಾತ್ರ ಕೆಲಸ ಮಾಡುತ್ತಿದ್ದಾರೆ. ತಜ್ಞ ವೈದ್ಯರ ಕೊರತೆಯಿಂದ ಹೇಳೋರು-ಕೇಳೋರು ಯಾರೂ ಇಲ್ಲದಂತಾಗಿದೆ.

ರಾತ್ರಿ ಗರ್ಭಿಣಿಯರನ್ನು ಹೆರಿಗೆಗೆ ಕರೆದಂತರೆ ನರ್ಸ್ ಬಿಟ್ಟಿರೆ ಆಸ್ಪತ್ರೆಯಲ್ಲಿ ಯಾವ ವೈದ್ಯರೂ ಇರುವುದಿಲ್ಲ. ಬೆಳಗ್ಗೆ 11ಕ್ಕೆ ಬಂದು 3ಗಂಟೆಗೆ ಹೋದರೆ ಮಾರನೆದಿನವೇ ಎಲ್ಲರೂ ಬರುವುದು. ಆಸ್ಪತ್ರೆಯಲ್ಲಿ ಅಗತ್ಯ ಸೌಲಭ್ಯವಿಲ್ಲ. ಶೌಚಗೃಹ, ಕುಡಿವ ನೀರು, ವಿದ್ಯುತ್ ಸಮಸ್ಯೆ ರೋಗಿಗಳಿಗೆ ಆತಂಕ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಕ್ಷಣ ಶಾಸಕಿ ಕರೆಮ್ಮ ಜಿ.ನಾಯಕ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ವ್ಯವಸ್ಥೆ ಮಾಡುವವರೆಗೆ ಹೋರಾಟ ನಿರಂತರ ನಡೆಸಲಾಗುವುದು ಎಂದು ತಿಳಿಸಿದರು. ತಾಲೂಕು ಅಧ್ಯಕ್ಷ ರಿಯಾಜ್ ಆರ್ತಿ, ಕಾರ್ಯದರ್ಶಿ ರಾಜು ನಾಯಕ, ಮುಖಂಡರಾದ ನರಸಣ್ಣ ನಾಯಕ, ಮೌನೇಶ ದಾಸರ್, ರಂಗನಾಥ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net