ಕುಡಿವ ನೀರಿನ ಸಮಸ್ಯೆಯಾಗದಂತೆ ಕ್ರಮ - ಪುರಸಭೆ ಮುಖ್ಯಾಧಿಕಾರಿ ಸಾಬಣ್ಣ ಹೇಳಿಕೆ

010222 Devadurga Google Jacquel
Published on

ದೇವದುರ್ಗ: ಬೇಸಿಗೆಯಲ್ಲಿ ಪಟ್ಟಣದ ಎಲ್ಲ ವಾರ್ಡ್‌ಗಳಿಗೆ ಸಮರ್ಪಕವಾಗಿ ಕುಡಿವ ನೀರು ಪೂರೈಕೆ ಮಾಡಲು ಗೂಗಲ್ ಜಾಕ್‌ವೆಲ್‌ನಲ್ಲಿ ಎರಡು ಮೋಟರ್ ಅಳವಡಿಸಲಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕರ ಹೇಳಿದರು.

ತಾಲೂಕಿನ ಕೃಷ್ಣಾ ನದಿ ದಂಡೆಯಲ್ಲಿರುವ ಗೂಗಲ್ ಗ್ರಾಮದಲ್ಲಿರುವ ಜಾಕ್‌ವೆಲ್‌ಗೆ ಸೋಮವಾರ ಭೇಟಿ ನೀಡಿ ಮೋಟರ್ ಅಳವಡಿಕೆ ಪರಿಶೀಲಿಸಿದರು. ಕೃಷ್ಣಾ ನದಿಯಿಂದ ಪಟ್ಟಣಕ್ಕೆ ಸರಬರಾಜು ಮಾಡಲಾಗುತ್ತಿರುವ ಕುಡಿವ ನೀರಿನ ಜಾಕವೆಲ್‌ನಲ್ಲಿ ಒಂದು ಮೋಟಾರು ಅಳವಡಿಸಲಾಗಿದ್ದು, ಮತ್ತೊಂದು ಅಳವಡಿಸಲಾಗುತ್ತಿದೆ. ಬೇಸಿಗೆಯಲ್ಲಿ ಪಟ್ಟಣಕ್ಕೆ ಶುದ್ಧ ಕುಡಿವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಮುಂಜಾಗ್ರತೆ ಕೈಗೊಳ್ಳಲಾಗಿದೆ. ಪಟ್ಟಣದ 23ವಾರ್ಡ್‌ಗಳು ಸೇರಿ ಹೊರವಲಯದಲ್ಲಿನ ನಿವಾಸಿಗಳಿಗೂ ನೀರು ಕಲ್ಪಿಸುವ ಗುರಿ ಹೊಂದಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net