ಅಂಬೇಡ್ಕರ್ ಜಯಂತಿ ಅದ್ದೂರಿ ಆಚರಣೆ

Untitled design (39)
ದೇವದುರ್ಗದ ಮಿನಿವಿಧಾನಸೌಧದಲ್ಲಿ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಸಹಾಯಕ ಚುನಾವಣಾಧಿಕಾರಿ ಚೇತನ್‌ಕುಮಾರ, ಬಿಇಒ ಎಚ್.ಸುಖದೇವ್, ಮುಖಂಡರಾದ ಮಹಾಂತೇಶ್ ಭವಾನಿ, ರಂಗಪ್ಪ ಕೋತಿಗುಡ್ಡ, ಶಿವಪ್ಪ ಬಲ್ಲಿದ, ಮಲ್ಲಿಕಾರ್ಜುನ ಇತರರಿದ್ದರು.
Published on

ದೇವದುರ್ಗ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಏ.14ರಂದು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ ಹೇಳಿದರು.

ಪಟ್ಟಣದ ಮಿನಿವಿಧಾನಸಭೆಯಲ್ಲಿ ಅಂಬೇಡ್ಕರ ಜಯಂತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದರು. ಸಾರ್ವಜನಿಕ ಕ್ಲಬ್‌ನ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.

ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ್ ಮಾತನಾಡಿ, ಜಯಂತಿ ನಿಮಿತ್ತ ಅಂಬೇಡ್ಕರ್ ಅವರ ಭಾವಚಿತ್ರ ಮೆರವಣಿಗೆಗೆ ಅವಕಾಶ ನೀಡುವ ಜತೆಗೆ ಎಲ್ಲ ಇಲಾಖೆ ಅಧಿಕಾರಿಗಳು ಜಯಂತಿಯಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಬೇಕು. ಗೈರಾಗುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಹನುಮಂತಪ್ಪ ಮನ್ನಾಪುರ ಮಾತನಾಡಿ, ಎಲ್ಲ ಇಲಾಖೆ ಕಚೇರಿ, ಶಾಲಾ ಕಾಲೇಜು ಸೇರಿ ಸಂಘ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಜಯಂತಿ ಆಚರಣೆಗೆ ಸೂಚಿಸಬೇಕು ಎಂದು ಒತ್ತಾಯಿಸಿದರು.
ಸಹಾಯಕ ಚುನಾವಣಾಧಿಕಾರಿ ಚೇತನ್‌ಕುಮಾರ, ಬಿಇಒ ಎಚ್.ಸುಖದೇವ್, ಮುಖಂಡರಾದ ಮಹಾಂತೇಶ್ ಭವಾನಿ, ರಂಗಪ್ಪ ಕೋತಿಗುಡ್ಡ, ಶಿವಪ್ಪ ಬಲ್ಲಿದ, ಮಲ್ಲಿಕಾರ್ಜುನ, ಮನೋಹರ್ ಬಲಿದ್, ಮಾನಪ್ಪ ಮೇಸ್ತ್ರಿ, ಬಸವರಾಜ್ ನಾಯಕ ಮಸ್ಕಿ, ವಿನೋದ್ ನಾಯಕ, ರಾಮಣ್ಣ ನಾಯಕ ಡಿ.ಕರಡಿಗುಡ್ಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net