ಸಂತೆಯಲ್ಲಿ ನಿಂತ ಉಸ್ತುವಾರಿ ಕಾರು, ಜನದಟ್ಟಣೆಗೆಗೆ ಬೆಚ್ಚಿದ ಅಧಿಕಾರಿಗಳು

30072022 devadurga news
Published on



ದೇವದುರ್ಗ: ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆಗೆ ಬಂದಿದ್ದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರ ನಾಯಕ, ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ, ಜಿಪಂ ಸಿಇಒ ನೂರ್ ಜಹರಾ ಖಾನಂ ಹಾಗೂ ಎಸಿ ರಜಿನಿಕಾಂತ್ ಚವ್ಹಾಣ್ ಶನಿವಾರ ಪಟ್ಟಣದ ಸಂತೆಯಲ್ಲಿ ಸಿಲುಕಿ ಹೈರಣಾದರು.

ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಲು ಪಟ್ಟಣಕ್ಕೆ ಆಗಮಿಸಿದ್ದಾಗ ಆಡಳಿತ ಸೌಧದ ಪ್ರಮುಖ ರಸ್ತೆಯಲ್ಲಿ ಸಂತೆ ನಡೆಯುತ್ತಿತ್ತು. ಇದರಿಂದಾಗಿ ಸುಮಾರು ಒಂದೂವರೆ ಕಿ.ಮೀ. ರಸ್ತೆಯುದ್ದಕ್ಕೂ ನಡೆಯುವ ಸಂತೆ ನೋಡಿ ಅಧಿಕಾರಿಗಳು ಹೌಹಾರಿದರು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಜಿಲ್ಲಾಧಿಕಾರಿ, ಜಿಪಂ ಸಿಇಒ, ಸಹಾಯಕ ಆಯುಕ್ತರೊಂದಿಗೆ ತಹಸೀಲ್ದಾರ್, ತಾಪಂ ಇಒ, ಟಿಎಚ್‌ಒ ವಾಹನಗಳು ಬಂದಿದ್ದವು. ಇದರಿಂದಾಗಿ 10ರಿಂದ 15 ನಿಮಿಷ ಸಂಚಾರ ದಟ್ಟಣೆ ಆಯಿತು. ಪೊಲೀಸ್ ಸಿಬ್ಬಂದಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪರದಾಡಿದರು. ಪೊಲೀಸರು ಸ್ವತಃ ತಳ್ಳುವ ಬಂಡಿಗಳನ್ನು ಎತ್ತಿ ಪಕ್ಕಕ್ಕೆ ಇಟ್ಟು ಅಧಿಕಾರಿಗಳ ಕಾರು ಹೋಗಲು ಅನುವು ಮಾಡಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net