ಜಹೀರುದ್ದಿನ್ ತಾತ ಸಾಮರಸ್ಯದ ಸಂಕೇತ

Untitled design (12)
Published on

ದೇವದುರ್ಗ: ಶ್ರೀಹಜರತ್ ಸೈಯದ್ ಜಹೀರುದ್ದಿನ್ ಪಾಷಾ ತಾತ ಕೈಗೊಂಡ ಸಾಮೂಹಿಕ ವಿವಾಹ, ಧಾರ್ಮಿಕ ಕಾರ್ಯಕ್ರಮಗಳು ಹಿಂದು-ಮುಸ್ಲಿಮರ ಸಾಮರಸ್ಯದ ಸಂಕೇತ ಎಂದು ಸಿಪಿಐ ಎನ್.ಗುಂಡೂರಾವ್ ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ನ್ಯಾಷನಲ್ ಫೆಲೋಶಿಫ್ ಪ್ರಶಸ್ತಿ ಪಡೆದ ಶ್ರೀಹಜರತ್ ಸೈಯದ್ ಜಹೀರುದ್ದಿನ್ ಪಾಷಾ ತಾತನಿಗೆ ಪಟ್ಟಣದಲ್ಲಿ ದೇವದುರ್ಗ ಸೌಹಾರ್ದ ವೇದಿಕೆಯಿಂದ ಆಯೋಜಿಸಿದ್ದ ಸನ್ಮಾನ ಸಮಾರಂಭ ಬುಧವಾರ ಉದ್ಘಾಟಿಸಿ ಮಾತನಾಡಿದರು. ತಾತ ಸಮಾಜಮುಖಿ, ಚಿಂತನಪರ, ಪ್ರಗತಿಪರ ನಿಲುವು ಹಾಗೂ ಕಾರ್ಯಕ್ರಮಗಳು ಸಮಾಜದಲ್ಲಿ ಸೌಹಾರ್ದ ಮೂಡುತ್ತಿದೆ. ಪ್ರಶಸ್ತಿ ಅವರ ಸಮಾಜಮುಖಿ ಕಾರ್ಯಗಳಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

ಸಾಹಿತಿ ಡಾ.ಗವಿಸಿದ್ದಪ್ಪ ಎಚ್.ಪಾಟೀಲ್ ಮಾತನಾಡಿ, ತಾತ ಸರ್ವಧರ್ಮ ಸಮನ್ವಯ ಸಂತರು. ಸಾಮರಸ್ಯ ಮೂಲಕ ಜನಮನದಲ್ಲಿ ತಾತ ಎಂದು ಪ್ರಸಿದ್ಧಿಯಾಗಿದ್ದಾರೆ. ಸುಮಾರು 140 ವರ್ಷಗಳ ಹಿಂದೆ ಸರ್ವಧರ್ಮ ಸಾಮರಸ್ಯಕ್ಕಾಗಿ ದರ್ಗಾ ಆರಂಭವಾಗಿದೆ. ಮೊಹರಂ, ಅಲಾಯಿ, ಸರ್ವಧರ್ಮ ಒಂದೇ ಎಂದು ಸಾರಿದ್ದಾರೆ. ದೇವದುರ್ಗ ಮಾತ್ರವಲ್ಲ ಕಲಬುರಗಿ ಜಿಲ್ಲೆಯ ಚಾಮನೂರ ಗ್ರಾಮದಲ್ಲಿ ಸಾಮೂಹಿಕ ವಿವಾಹ ಮಾಡಿ ಧಾರ್ಮಿಕ ತತ್ವ ಬೋಧನೆ ಮಾಡುತ್ತಿದ್ದಾರೆ ಎಂದರು.

ಅಹಿಂದ ಚಳವಳಿ ಜಿಲ್ಲಾ ಸಂಚಾಲಕ ಮಾನಶಯ್ಯ ನಾಯಕ, ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಮಲ್ಲಯ್ಯ, ಪ್ರಮುಖರಾದ ಡಾ.ರಾಜು ಮಾಳಗಿ, ಎಂ.ಡಿ.ಇಸಾಕ್, ಮರಡಿ ಸಣ್ಣಫಕೀರ್ ಸಾಹೇಬ್ ತಾತ, ಸಂಗಮನಾಥ ತಾತ, ಮಲದಕಲ್ ಫಕೀರ್‌ಸಾಬ್, ಪುರಸಭೆ ಮುಖ್ಯಧಿಕಾರಿ ಕೆ.ಹಂಪಯ್ಯ, ಪುರಸಭೆ ಸದಸ್ಯ ಮಾನಪ್ಪ ಮೇಸ್ತ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net