ಡಮಲನಾಯಕ ತಾಂಡಾದಲ್ಲಿ ಬಿರುಗಾಳಿಯಿಂದ ಮನೆಗಳಿಗೆ ಹಾನಿ

080520 Damalanayaka Tanda Storm
Published on

ದೇವದುರ್ಗ: ತಾಲೂಕಿನ ಕ್ಯಾದಿಗೇರಾ ಗ್ರಾಪಂ ವ್ಯಾಪ್ತಿಯ ಡಮಲನಾಯಕ ತಾಂಡಾದಲ್ಲಿ ಬುಧವಾರ ತಡರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಅನೇಕ ಮನೆಗಳಿಗೆ ಹಾನಿಯಾಗಿದೆ. ತಡರಾತ್ರಿ ಬೀಸಿದ ಬಿರುಗಳಿಗೆ ಮನೆಯ ಟಿನ್‌ಶೀಟ್ ಗಾಳಿಗೆ ಹಾರಿಹೋಗಿದ್ದು, ಹತ್ತಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಗ್ರಾಮದ ಲಕ್ಷ್ಮಣ, ಮಲ್ಲೇಶ ಎನ್ನುವವರ ಮನೆಯ ಎಲ್ಲ ಟಿನ್ ಶೀಟ್‌ಗಳು ಸಂಪೂರ್ಣ ಕಿತ್ತುಹೋಗಿವೆ. ಇನ್ನು ಕೆಲವರ ಮನೆಗಳ ಟಿನ್ ಭಾಗಶಃ ಕಿತ್ತುಹೋಗಿದ್ದು, ದವಸಧಾನ್ಯಗಳು ಹಾಳಾಗಿವೆ.

ದೇವರಗುಂಡಗುರ್ತಿ, ಗೂಗಲ್, ಕ್ಯಾದಿಗೇರಾ ಸೇರಿ ವಿವಿಧೆಡೆ ಹತ್ತಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿವೆ. ಸ್ವಲ್ಪ ಗಾಳಿಬೀಸಿದರೆ ಸಾಕು ಜೆಸ್ಕಾಂ ವಿದ್ಯುತ್ ಕಡಿತ ಮಾಡುತ್ತದೆ. ಗುರುವಾರ ಸಂಜೆ ಬೀಸಿದ ಬಿರುಗಾಳಿಗೆ ರಾತ್ರಿಯಿಡಿ ವಿದ್ಯುತ್ ಕಡಿತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net