ಸಾಂಸ್ಕೃತಿಕ ಭವನಕ್ಕೆ ಜಮೀನು ನೀಡಲು ತಹಸೀಲ್ದಾರ್‌ಗೆ ಗಂಗಾಮತ ಸಮುದಾಯದ ಪ್ರಮುಖರ ಮನವಿ

Devadurga Gangamata Community Appeal
ದೇವದುರ್ಗ ತಹಸಿಲ್ ಕಚೇರಿ ಶಿರಸ್ತೇದಾರ್ ಮಂಜುನಾಥಗೆ ತಾಲೂಕು ಗಂಗಾಮತ ಸಮುದಾಯ ಸೇವಾ ಸಂಘದಿಂದ ಬುಧವಾರ ಮನವಿ ಸಲ್ಲಿಸಲಾಯಿತು.
Published on

ದೇವದುರ್ಗ: ಗಂಗಾಮತ ಸಮುದಾಯದ ಜನರು ಯಾವುದೇ ಕಾರ್ಯಕ್ರಮ ಮಾಡಲು ಸಾಂಸ್ಕೃತಿಕ ಭವನದ ಕೊರತೆಯಿದ್ದು, ಸಮುದಾಯಕ್ಕೆ ಭವನ ನಿರ್ಮಾಣ ಮಾಡಲು 4 ಎಕರೆ ಜಮೀನು ಮಂಜೂರು ಮಾಡುವಂತೆ ಒತ್ತಾಯಿಸಿ ತಹಸಿಲ್ ಕಚೇರಿ ಶಿರಸ್ತೇದಾರ್ ಮಂಜುನಾಥಗೆ ತಾಲೂಕು ಗಂಗಾಮತ ಸಮುದಾಯ ಸೇವಾ ಸಂಘ ಬುಧವಾರ ಮನವಿ ಸಲ್ಲಿಸಿತು.

ತಾಲೂಕಿನಲ್ಲಿ ಗಂಗಾಮತ ಸಮುದಾಯದ ಸುಮಾರು 30 ಸಾವಿರ ಜನಸಂಖ್ಯೆಯಿದ್ದು, ಸಭೆ, ಸಮಾರಂಭ, ಮದುವೆ ಹಾಗೂ ಇತರ ವಿವಿಧ ಕಾರ್ಯಕ್ರಮ ಮಾಡಲು ಸ್ಥಳಾವಕಾಶದ ಕೊರತೆ ಇದೆ. ಇದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಪಟ್ಟಣದಲ್ಲಿ ಲಭ್ಯವಿರುವ ಕಂದಾಯ ಇಲಾಖೆ ಜಾಗದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಹಾಗೂ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net