ಕೊಚ್ಚಿ ಹೋಯಿತು ಫಸಲು

27082022 dvd water flood
Published on

ದೇವದುರ್ಗ: ತಾಲೂಕಿನಲ್ಲಿ ಶುಕ್ರವಾರ ತಡರಾತ್ರಿಯಿಂದ ಬೆಳಗಿನ ಜಾವದವರೆಗೂ ಸುರಿದ ಭಾರಿ ಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದ್ದು, ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.
ಜಾಲಹಳ್ಳಿ, ಅರಕೇರಾ ಹೋಬಳಿ ಬಹುತೇಕ ಹಳ್ಳಿಗಳಲ್ಲಿ ಬೆಳೆಗಳು ಸಂಪೂರ್ಣ ಹಾಳಾಗಿವೆ. ವಿವಿಧೆಡೆ ರಸ್ತೆ ಕುಸಿದಿದ್ದು, ಸೇತುವೆಗಳಿಗೂ ಹಾನಿಯಾಗಿದೆ. ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಗಲಗ ಗ್ರಾಮದಲ್ಲಿ ರೈತರಾದ ಹನುಮಂತ್ರಾಯ ಕಡಂಗಲ್, ಅಯ್ಯಣ್ಣ, ಚನ್ನಬಸವ, ವೆಂಕಟೇಶ ಕಡಂಗಲ್, ನಿಂಗಪ್ಪ ಕುಂಬಾರ, ಚಂದಪ್ಪ ಕುಂಬಾರ, ಶೇಖರಪ್ಪ ಕುಂಬಾರ ಅವರ ಬೆಳೆಗಳು ಹಾಳಾಗಿವೆ. ಅರಕೇರಾ ಹೋಬಳಿಯ ಬಿ.ಗಣೇಕಲ್, ಗಣಜಲಿ, ಮುಂಡರಗಿ, ಪಂದ್ಯಾನ, ಸಮುದ್ರ, ಸೂರ್ಯನಾಯ್ಕ ತಾಂಡಾದಲ್ಲಿ ಭತ್ತದ ಬೆಳೆ ಕೊಚ್ಚಿ ಹೋಗಿದೆ. ರೈತರಾದ ಭೀಮಣ್ಣ, ಹನುಮಂತ, ಶಿವರಾಜ ಅವರ ಭತ್ತದ ಗದ್ದೆ ಸಂಪೂರ್ಣ ಮುಳುಗಡೆಯಾಗಿದೆ. ತೊಗರಿ, ಹತ್ತಿ, ಮೆಣಸಿನಕಾಯಿ, ಸಜ್ಜೆ, ಸೂರ್ಯಕಾಂತಿ ಬೆಳೆಗಳು ನೀರು ನಿಂತು ಕೊಳೆಯುವ ಭೀತಿ ಎದುರಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net