ಜನತಾ ಕರ್ಫ್ಯೂಗೆ ಜನರ ಬೆಂಬಲ

Gabburu Market Band Corona Curfew
ದೇವದುರ್ಗ ತಾಲೂಕಿನ ಗಬ್ಬೂರಿನಲ್ಲಿ ಶುಕ್ರವಾರ ಅಂಗಡಿಗಳನ್ನು ಬಂದ್ ಮಾಡಲಾಗಿತ್ತು.
Published on

ದೇವದುರ್ಗ: ಕರೊನಾ ಎರಡನೇ ಅಲೆ ತಡೆಗೆ 14ದಿನಗಳ ಲಾಕ್‌ಡೌನ್ ಮಾದರಿಯ ಜನತಾ ಕರ್ಫ್ಯೂ ಜಾರಿಯಾದ ಮೂರನೆಯ ದಿನವಾದ ಶುಕ್ರವಾರವೂ ಜನ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ.

ಪಟ್ಟಣ, ಜಾಲಹಳ್ಳಿ, ಗಬ್ಬೂರು, ಮಸರಕಲ್, ಅರಕೇರಾ ಮತ್ತಿತರೆಡೆಯ ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ಬಂದ್ ಮಾಡುವ ಮೂಲಕ ಬೆಂಬಲಿಸಿದರು. ಪುರಸಭೆ ಸಿಬ್ಬಂದಿ ಕಸ ವಿಲೇವಾರಿ ವಾಹನಗಳಲ್ಲಿ ಬೆಳಗ್ಗೆ 9 ಗಂಟೆ ನಂತರ ಪಟ್ಟಣದ ಉದ್ದಗಲಕ್ಕೂ ಸೈರನ್ ಹಾಕಿಕೊಂಡು ಜಾಗೃತಿ ಮೂಡಿಸಿದರು. ಈ ವೇಳೆ ಅವಧಿ ಮೀರಿ ಅಂಗಡಿಗಳನ್ನು ತೆರೆದರೆ, ಅನಗತ್ಯ ರಸ್ತೆಗಳಲ್ಲಿ ಓಡಾಡಿದರೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದರು. ಒಂದೆಡೆ ಪುರಸಭೆ ಮತ್ತು ಪೊಲೀಸ್ ಸಿಬ್ಬಂದಿ ಎಚ್ಚರಿಕೆ ನೀಡುತ್ತಿದ್ದರೆ, ಇನ್ನೊಂದೆಡೆ ವ್ಯಾಪಾರಸ್ಥರು, ಸಾರ್ವಜನಿಕರು ಸಹಕರಿಸಿದ್ದರಿಂದ ಮೂರನೆಯ ದಿನದ ಜನತಾ ಕರ್ಫ್ಯೂ ಯಶಸ್ವಿಯಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net