ದೇವದುರ್ಗ ಗಾಂಧಿ ವೃತ್ತ ಏರಿಯಾ ಸೀಲ್‌ಡೌನ್; 40 ವರ್ಷದ ಮಹಿಳೆಗೆ ಪಾಸಿಟಿವ್ ಹಿನ್ನೆಲೆ

11072020 Devadura Corona Case Sealdown
Published on

ದೇವದುರ್ಗ: 40 ವರ್ಷದ ಮಹಿಳೆ ಸೇರಿ ಐವರಿಗೆ ಕರೊನಾ ಪಾಸಿಟಿವ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಪಟ್ಟಣದ ಕೆಲ ಏರಿಯಾಗಳನ್ನು ತಾಲೂಕು ಆಡಳಿತ ಶುಕ್ರವಾರ ಸಂಜೆಯಿಂದ ಸೀಲ್‌ಡೌನ್ ಮಾಡಲಾಯಿತು.

ಮಹಾತ್ಮ ಗಾಂಧಿ, ಬಸವಣ್ಣ ಮುಖ್ಯ ವೃತ್ತ ಮಾರ್ಗದ ರಸ್ತೆ ಸೀಲ್‌ಡೌನ್ ಮಾಡಿ, ಅಂಗಡಿ ಮುಂಗಟ್ಟು ಬಂದ್ ಮಾಡಲಾಗಿದೆ. ರಸ್ತೆಯ ಎರಡೂ ಕಡೆ ಬ್ಯಾರಿಕೇಡ್ ಹಾಕಿ, ಜನ ಹಾಗೂ ವಾಹನ ಸಂಚಾರ ಬಂದ್ ಮಾಡಲಾಗಿದೆ. ಆರೋಗ್ಯ ಇಲಾಖೆ ಅಕ್ಕಪಕ್ಕದ ಮನೆಯ ಸದಸ್ಯರ ಮಾಹಿತಿ ಪಡೆದಿದೆೆ. ಪಾಸಿಟಿವ್ ದೃಢಪಟ್ಟ ವ್ಯಕ್ತಿಯ ಜತೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿರುವವರ ಪತ್ತೆ ಕಾರ್ಯ ನಡೆಯುತ್ತಿದೆ.

ಮನೆಯ ಸದಸ್ಯರ ಮಾಹಿತಿ ಪಡೆದ ಆರೋಗ್ಯ ಇಲಾಖೆ ಗಂಟಲು ದ್ರವ ನಡೆಸಿದೆ. ಇದರಿಂದ ಮುಖ್ಯ ರಸ್ತೆ ಸುತ್ತಲೂ ಮನೆಯ ನಿವಾಸಿಗಳು, ಅಂಗಡಿ ಮಾಲೀಕರು ಆತಂಕ ಪಡುವಂತಾಗಿದೆ. ಆಶೋಕ ವಾರ್ಡ್‌ನಲ್ಲಿ ಇಬ್ಬರಿಗೆ ಪಾಸಿಟಿವ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸಿಪಿಐ ಆರ್.ಎಂ.ನದಾಫ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net