

ದೇವದುರ್ಗ: 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪಟ್ಟಣದ ಶಿಕಾರಿಮಠದಿಂದ ಮಸರಕಲ್ ಬಾಬಯ್ಯ ದರ್ಗಾದವರೆಗೆ ಕಾಂಗ್ರೆಸ್‌ನ ನೂರಾರು ಕಾರ್ಯಕರ್ತರ ಹಾಗೂ ಮುಖಂಡರು ಸದ್ಭಾವನಾ ಪಾದಯಾತ್ರೆ ಕೈಗೊಳ್ಳಲಾಗಿದೆ ಎಂದು ಮಾಜಿ ಸಂಸದ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ ವಿ ನಾಯಕ ಹೇಳಿದರು.
ಪಟ್ಟಣದ ಕಪಿಲ್ ಸಿದ್ದರಾಮೇಶ್ವರ ಶಿಕಾರಿಮಠದಲ್ಲಿ ಪಾದಯಾತ್ರೆಗೆ ಚಾಲನೆ ನೀಡಿ ಭಾನುವಾರ ಮಾತನಾಡಿದರು. ಕಾಂಗ್ರೆಸ್ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷ. ಹಲವಾರು ನಾಯಕರ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಡುವಲ್ಲಿ ಕಾಂಗ್ರೆಸ್ ಕೊಡುಗೆ ಅಪಾರ. ಅಲ್ಲದೆ, 70 ವರ್ಷ ಕಾಂಗ್ರೆಸ್ ಸತತವಾಗಿ ದೇಶದಲ್ಲಿ ಆಡಳಿತ ನಡೆಸಿ ರೈತರ ಕೂಲಿ ಕಾರ್ಮಿಕರ ಎಲ್ಲಾ ಜಾತಿ ಜನಾಂಗದ ಬಡವರ ದೀನ ದಲಿತರಗಾಗಿ ಹಗಲಿರುಳು ಶ್ರಮಿಸಿದೆ ಎಂದರು.
ರಾಜ್ಯ ಹಾಗೂ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಕ್ಕೆ ಮುಂದಿನ ದಿನಮಾನಗಳಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದರು. ಎಂಎಲ್ ಸಿ ಶರಣಗೌಡ ಬಯ್ಯಪುರ, ಎಂಎಲ್ಸಿ ಎನ್.ಎಸ್.ಬೋಸರಾಜು, ಗ್ರಾಮೀಣ ಶಾಸಕ ಬಸನಗೌಡ ದದ್ದಲ್.ಎ. ರಾಜಶೇಖರ ನಾಯಕ ಅಮರೇಗೌಡ ಹಂಚಿನಾಳ, ಅಬ್ದುಲ್ ಅಜೀದ್, ಆದನಗೌಡ ಬೂಂಕಲ್ ದೊಡ್ಡಿ. ಶರಣಗೌಡ ಗೌರಂಪೇಟ್, ನಾಗರಾಜ ಪಾಟೀಲ್ ನೀಲಗಲ್, ಇಕ್ಬಾಲ್ ಸಾಬ್, ಅಮಿನ್ ಬಾಷಾ, ಖಾಜಾ ಹುಸೇನ್, ಬಾಬು. ಮಾದೇವಪ್ಪ ಗೌಡ ಚಿಕ್ಕಬೂದರು, ಸಿದ್ದಪ್ಪ ನಾಯಕ, ಗುಲಾಮ ಮಹಿಬೂಬ್ ಇತರರಿದ್ದರು.