ದೇವದುರ್ಗದಲ್ಲಿ ಕಾಂಗ್ರೆಸ್ ಬಿಜೆಪಿ ಒಳಒಪ್ಪಂದ

Karemma G Nayak JDS Devadurga 02
ಕರೆಮ್ಮ ಜಿ.ನಾಯಕ.
Published on

ದೇವದುರ್ಗ: ಕ್ಷೇತ್ರದಲ್ಲಿ ಜೆಡಿಎಸ್ ಸೋಲಿಸಲು ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಒಳಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಜೆಡಿಎಸ್ ಕಲ್ಯಾಣ ಕರ್ನಾಟಕ ಭಾಗದ ವೀಕ್ಷಕಿ ಕರೆಮ್ಮ ಜಿ.ನಾಯಕ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದರು. ಇತ್ತೀಚೆಗೆ ಮಾನಸಗಲ್‌ನಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ.ನಾಯಕ ಜೆಡಿಎಸ್ ಬಗ್ಗೆ ಹಗುರವಾಗಿ ಮಾತನಾಡಿದ್ದು ಖಂಡನೀಯ. ರಾಷ್ಟ್ರೀಯ ಪಕ್ಷಗಳಿಗೆ ಬೆಂಬಲ ನೀಡುವಂತೆ ಪರೋಕ್ಷವಾಗಿ ಹೇಳುವ ಮೂಲಕ ಬಿಜೆಪಿ ಜತೆ ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದಾರೆ ಎಂದು ದೂರಿದರು.

ತಾಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಮೂಡಲಗುಂಡ ಮಾತನಾಡಿ, ಕ್ಷೇತ್ರದಲ್ಲಿ ಕಾಂಗ್ರೆಸ್ ಕುಟುಂಬ ರಾಜಕಾರಣದಿಂದ ಬೇಸತ್ತು ಜೆಡಿಎಸ್ ಸೇರಿರುವುದಾಗಿ ತಿಳಿಸಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ಬುಡ್ಡನಗೌಡ ಜಾಗಟಗಲ್, ಶಿವನಗೌಡ ಕಕ್ಕಲದೊಡ್ಡಿ, ರಂಗಪ್ಪ ಕೋಲ್ಕರ್, ಭೀಮನಗೌಡ, ಚನ್ನಪ್ಪ ಗೆಜ್ಜಬಾವಿ, ಭೀಮಣ್ಣ ಗುಮೇದಾರ್, ರೇಣುಕಾಸ್ವಾಮಿ, ಶಮಿನಾ ಬೇಗಂ, ದೊಡ್ಡ ರಂಗಣ್ಣ ಪಾಟೀಲ್, ಅಮರೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net