ಕೋಳಿ ಕಳ್ಳನನ್ನು ಕಂಬಕ್ಕೆ ಕಟ್ಟಿ ಗ್ರಾಮಸ್ಥರಿಂದ ಧರ್ಮದೇಟು

270722 Alokodu Village chicken thief
ದೇವದುರ್ಗ ತಾಲೂಕಿನ ಆಲ್ಕೋಡ ಗ್ರಾಮದಲ್ಲಿ ಕೋಳಿ ಕಳ್ಳತನ ಮಾಡುತ್ತಿದ್ದ ಯುವಕನನ್ನು ಗ್ರಾಮಸ್ಥರು ಕಂಬಕ್ಕೆ ಕಟ್ಟಿಹಾಕಿರುವುದು.
Published on

ದೇವದುರ್ಗ: ಆಲ್ಕೋಡ ಗ್ರಾಮದಲ್ಲಿ ಕೋಳಿ ಕಳ್ಳತನ ಮಾಡುತ್ತಿದ್ದ ಯುವಕನನ್ನು ಗ್ರಾಮಸ್ಥರು ಹಿಡಿದು ಕಂಬಕ್ಕೆ ಕಟ್ಟಿಹಾಕಿ ಮಂಗಳವಾರ ರಾತ್ರಿ ಧರ್ಮದೇಟು ನೀಡಿದ್ದಾರೆ.

ಆಲ್ಕೋಡ, ಶಾವಂತಗಲ್ ಸೇರಿ ಸುತ್ತಮುತ್ತ ಗ್ರಾಮಗಳಲ್ಲಿ ಕಳೆದ 10-15ದಿನಗಳಿಂದ ಕೋಳಿ ಕಳ್ಳತನ ನಡೆದಿದ್ದವು. ಮಂಗಳವಾರ ಸಂಜೆ ಮೂವರು ಕಳ್ಳರು ಗ್ರಾಮಕ್ಕೆ ಬಂದಿದ್ದು, ಕೋಳಿ ಕಳ್ಳತನ ಮಾಡುವಾಗ ಗ್ರಾಮಸ್ಥರ ಕೈಗೆ ಸಿಕ್ಕುಬಿದ್ದಿದ್ದಾರೆ. ಅದರಲ್ಲಿ ಇಬ್ಬರು ಕಳ್ಳರು ಪರಾರಿಯಾಗಿದ್ದರೆ ಇನ್ನೊಬ್ಬ ರವಿ ಎನ್ನುವ ಯುವಕ ಸೆರೆಸಿಕ್ಕಿದ್ದಾನೆ.

ಶಾವಂತಗಲ್ ಗ್ರಾಮದ ರವಿ ಎನ್ನುವ ಯುವಕನಿಗೆ ಧರ್ಮದೇಟು ನೀಡಿದ ಗ್ರಾಮಸ್ಥರು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿದ್ದರು. ಕೆಲದಿನಗಳ ಹಿಂದೆ ಗ್ರಾಮದಲ್ಲಿ ಹತ್ತಕ್ಕೂ ಹೆಚ್ಚು ಕೋಳಿ ಕಳ್ಳತನವಾಗಿದ್ದವು. ಅಲ್ಲದೆ ಆಗಾಗ ಗ್ರಾಮದಲ್ಲಿ ಕೋಳಿ ಕಳ್ಳತನ ಘಟನೆಗಳು ನಡೆದಿವೆ. ಕೋಳಿ ಕಳ್ಳರು ಮದ್ಯವ್ಯಸನಿಗಳಾಗಿದ್ದು, ಕುಡಿತದ ಚಟಕ್ಕಾಗಿ ಈ ಕೃತ್ಯ ಮಾಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net