ದಾನ ಜಗತ್ತಿನ ಅಮೂಲ್ಯವಾದ ಆಸ್ತಿ ಎಂದ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಸ್ವಾಮೀಜಿ

090622 Gabburu Srisailala Jagadguru is a two-pronged program
ದೇವದುರ್ಗ ತಾಲೂಕು ಗಬ್ಬೂರಿನಲ್ಲಿ ಶ್ರೀಶೈಲ ಜಗದ್ಗುರುಗಳ ದ್ವಾದಶ ಪೀಠಾರೋಹಣ ಕಾರ್ಯಕ್ರಮ ನಿಮಿತ್ತ ಆಯೋಜಿಸಿದ್ದ ಪೂರ್ವಭಾವಿ ಸಮಾಲೋಚನಾ ಸಭೆಯನ್ನು ಶ್ರೀಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.
Published on

ದೇವದುರ್ಗ: ದಾನವೇ ಜಗತ್ತಿನ ಶ್ರೇಷ್ಠವಾದ ಆಸ್ತಿಯಾಗಿದ್ದು, ಅತ್ಯಂತ ಅಮೂಲ್ಯವಾದ ಆಚರಣೆ ಪದ್ಧತಿಯಾಗಿದೆ. ದಾನವೇ ಸನ್ಮಾರ್ಗಕ್ಕೆ ಉತ್ತಮ ಆದಿಯಾಗಿದೆ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಗಬ್ಬೂರು ಪಟ್ಟಣದ ಶ್ರೀಶಾಂತಮೂರ್ತಿ ಮಹಾಸ್ವಾಮಿಗಳು ಕಲ್ಯಾಣ ಮಂಟಪದಲ್ಲಿ ಶ್ರೀಶೈಲ ಜಗದ್ಗುರುಗಳ ದ್ವಾದಶ ಪೀಠಾರೋಹಣ ಹಾಗೂ ಜನ್ಮ ಸುವರ್ಣ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಪೂರ್ವಭಾವಿ ಸಮಾಲೋಚನೆ ಸಭೆಯಲ್ಲಿ ಸಾನ್ನಿಧ್ಯವಹಿಸಿ ಗುರುವಾರ ಮಾತನಾಡಿದರು.

ಮನುಷ್ಯ ತಾನು ಗಳಿಸಿದ ಸಂಪತ್ತನ್ನು ಮೂರು ವಿಧದಲ್ಲಿ ಖರ್ಚು ಮಾಡಬಹುದು. ದಾನ, ಉಪಭೋಗ ಹಾಗೂ ನಾಶದ ಮೂಲಕ ವ್ಯಯಿಸಬಹುದು. ಉಪಯೋಗ ಹಾಗೂ ನಾಶ ಮಾಡಿದ ಸಂಪತ್ತು ಯಾವತ್ತೂ ಒಳ್ಳೆಯದ್ದಲ್ಲ. ದಾನ ಮಾಡಿದ ಸಂಪತ್ತು ಮಾತ್ರ ಸರ್ವಶ್ರೇಷ್ಠವಾದದ್ದು. ಮುಚ್ಚಿಟ್ಟ ಜ್ಞಾನ, ಸಂಪತ್ತು ಯಾವತ್ತೂ ಉಪಯೋಗಕ್ಕೆ ಬರುವುದಿಲ್ಲ. ಅದು ಅಳೆಯುತ್ತದೆ ಹೊರತು ಬೆಳೆಯುವುದಿಲ್ಲ. ಹಂಚಿದ ಜ್ಞಾನ ಹಾಗೂ ಸಂಪತ್ತು ಮಾತ್ರ ಬೆಳೆದು, ಹೊಳೆಯಲು ಸಾಧ್ಯ. ಪ್ರತಿಯೊಬ್ಬರೂ ದುಡಿಯುವ ಹಾಗೂ ಸಂಪಾದಿಸುವ ಆಸ್ತಿಯಲ್ಲಿ ಸ್ವಲ್ಪ ದಾನ ಮಾಡುವ ಗುಣ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಸುವರ್ಣ ಮಹೋತ್ಸವ ಅಂಗವಾಗಿ 2022ರ ಅಕೋಬರ್ 29ರಿಂದ 2023ರ ಜನವರಿ 14ರವರೆಗೆ ಜನಜಾಗೃತಿ ಪಾದಯಾತ್ರೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಬಗ್ಗೆ ಭಕ್ತರ ಜತೆ ಸ್ವಾಮೀಜಿಗಳು ಚರ್ಚೆ ನಡೆಸಿ, ವಿವಿಧ ಕಾರ್ಯಕ್ರಮ ನಡೆಸುವ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಂಡರು. ಗಬ್ಬೂರಿನ ಶ್ರೀಬೂದಿಬಸವ ಸ್ವಾಮೀಜಿ, ಸುಲ್ತಾನಪುರ ಮಠದ ಶ್ರೀಶಂಭು ಸೋಮನಾಥ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಗಬ್ಬೂರು, ಸುಲ್ತಾನಪುರ ಸೇರಿ ವಿವಿಧ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net