ಕಿರಿಕಿರಿಯಿಂದ ವೃತ್ತಿ ನಿರ್ವಹಣೆಗೆ ತೊಂದರೆ

191222 Devadurga Lawyers bar Appeal
ದೇವದುರ್ಗದಲ್ಲಿ ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್‌ಗೆ ತಾಲೂಕು ವಕೀಲರ ಸಂಘ ಸೋಮವಾರ ಮನವಿ ಸಲ್ಲಿಸಿತು.
Published on

ದೇವದುರ್ಗ: ವಕೀಲರ ಮೇಲೆ ನಡೆಯುತ್ತಿರುವ ಹಲ್ಲೆ, ದಬ್ಬಾಳಿಕೆ ತಡೆಯಲು ಬೆಳಗಾವಿಯಲ್ಲಿ ಅಧಿವೇಶನದಲ್ಲಿ ವಕೀಲರ ಸಂರಕ್ಷಣಾ ಕಾಯ್ದೆ ಮಂಡಿಸಿ, ಜಾರಿಗೆ ತರುವಂತೆ ಒತ್ತಾಯಿಸಿ ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್‌ಗೆ ತಾಲೂಕು ವಕೀಲರ ಸಂಘ ಸೋಮವಾರ ಮನವಿ ಸಲ್ಲಿಸಿತು.

ವಕೀಲರ ಮೇಲೆ ಕಕ್ಷಿದಾರರು, ಕೆಲ ಕಿಡಿಗೇಡಿಗಳು ಹಲ್ಲೆ, ದಬ್ಬಾಳಿಕೆ, ಬೆದರಿಸುವಂಥ ಕೆಲಸ ಮಾಡುತ್ತಿದ್ದು, ಇದರಿಂದ ವೃತ್ತಿ ನಿರ್ವಹಣೆಗೆ ತೀವ್ರ ಸಮಸ್ಯೆಯಾಗಿದೆ. ಪೊಲೀಸರು ಕೂಡ ಕಿರಿಕಿರಿ ಮಾಡುತ್ತಿದ್ದು, ಹಲವು ಸಂದರ್ಭದಲ್ಲಿ ಹಲ್ಲೆ ಘಟನೆಗಳು ನಡೆದಿವೆ. ವಿನಾಕಾರಣ ವಕೀಲರ ಮೇಲೆ ನಡೆಯುತ್ತಿರುವ ಹಲ್ಲೆ ಮತ್ತು ದೌರ್ಜನ್ಯವನ್ನು ತಡೆಯಬೇಕಾಗಿದೆ ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net