ಮೊಟ್ಟೆ-ತರಕಾರಿ ಬಿಲ್ ಪಾವತಿಸಿ ದೇವದುರ್ಗದಲ್ಲಿ ಅಂಗನವಾಡಿ ನೌಕರರ ಸಂಘದ ಪ್ರತಿಭಟನೆ

Devadurga Anganawadi workers protes
ದೇವದುರ್ಗದ ತಾಪಂ ಕಚೇರಿ ಮುಂದೆ ಅಂಗನವಾಡಿ ನೌಕರರ ಸಂಘ ಸೋಮವಾರ ಪ್ರತಿಭಟನೆ ನಡೆಸಿತು. ತಾಲೂಕು ಅಧ್ಯಕ್ಷೆ ರಂಗಮ್ಮ ಅನ್ವರ್, ಕಾರ್ಯದರ್ಶಿ ರಮಾದೇವಿ, ಸಿಐಟಿಯು ಸಂಚಾಲಕ ಗಿರಿಯಪ್ಪ ಪೂಜಾರಿ, ಈಶಮ್ಮ ಊಟಿ, ಚಂದ್ರಕಲಾ, ಶೇಖಮ್ಮ, ಸುಶೀಲಾ, ಯಂಕಮ್ಮ, ಚಂದ್ರಕಲಾ ಇತರರಿದ್ದರು.
Published on

ದೇವದುರ್ಗ: ಅಂಗನವಾಡಿ ಕಾರ್ಯಕರ್ತೆಯರನ್ನು ಬೇರೆ ಕೇಂದ್ರಗಳಿಗೆ ವರ್ಗಾವಣೆ, ಮುಂಬಡ್ತಿ, ಅನುಕಂಪದ ಆಧಾರದ ನೇಮಕ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪಟ್ಟಣದ ತಾಪಂ ಕಚೇರಿ ಮುಂದೆ ಅಂಗನವಾಡಿ ನೌಕರರ ಸಂಘ (ಸಿಐಟಿಯು ಸಂಯೋಜಿತ) ಸೋಮವಾರ ಪ್ರತಿಭಟನೆ ನಡೆಸಿತು.

ಗ್ರಾಮೀಣ ಭಾಗದ ಗರ್ಭಿಣಿ, ಬಾಣಂತಿಯರು ಹಾಗೂ ಮಕ್ಕಳ ಆರೋಗ್ಯ ಕಾಪಾಡುವಲ್ಲಿ ಕಾರ್ಯಕರ್ತೆಯರ ಪಾತ್ರ ಹೆಚ್ಚಿದೆ. ಆದರೆ, ಕಾರ್ಯಕರ್ತೆಯರು ಹಲವು ತೊಂದರೆ ಅನುಭವಿಸುತ್ತಿದ್ದಾರೆ. ವಿವಿಧ ಬೇಡಿಕೆ ಈಡೇರಿಸುವಂತೆ ಹಲವು ಸಲ ಪ್ರತಿಭಟನೆ ನಡೆಸಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಕೂಡಲೇ ಬಾಕಿ ಇರುವ 18 ತಿಂಗಳ ತರಕಾರಿ ಹಣ ನೀಡಬೇಕು. ಜುಲೈ, ಆಗಸ್ಟ್, ಸೆಪ್ಟೆಂಬರ್ ವೇತನ ತಕ್ಷಣವೇ ನೀಡಬೇಕು. ಪ್ರತಿತಿಂಗಳು ಆಹಾರ ಸರಬರಾಜಾಗಬೇಕು. ಮೊಟ್ಟೆ ಬಿಲ್ ಪಾವತಿಸಬೇಕು. ಅಡುಗೆ ಪರಿಕರಗಳನ್ನು ನೀಡಬೇಕು. ಸರ್ಕಾರಿ ಜಯಂತಿಗೆ ಕಾಂಟೆಜನ್ಸಿ ಕೊಡಬೇಕು. ಅಂಗನವಾಡಿ ಕೇಂದ್ರಗಳ ಸೌಲಭ್ಯಕ್ಕಾಗಿ ತಾಪಂನಿಂದ 20 ಸಾವಿರ ರೂ. ನಿಧಿ ನೀಡಬೇಕು. ಎಲ್ಲ ಕೇಂದ್ರಗಳಿಗೆ ಇ-ಸ್ವತ್ತು ಮಾಡಬೇಕು. ಸಿಎ ಸೈಟ್‌ನಲ್ಲಿ ಅಂಗನವಾಡಿ ಕೇಂದ್ರಗಳಿಗೆ ಮೀಸಲಿಡಬೇಕು. ವಿದ್ಯುತ್, ಕುಡಿವ ನೀರು ಒದಗಿಸಬೇಕು. ನರೇಗಾ ಯೋಜನೆಯಡಿ ಶೌಚಗೃಹ, ಕಾಂಪೌಂಡ್ ನಿರ್ಮಿಸಬೇಕು. ಪೋಷಣಾ ಅಭಿಯಾನ ಹಣ ಬಿಡುಗಡೆ ಮಾಡಬೇಕು. ಬಾಡಿಗೆ ಹಣ ಪಾವತಿಸಬೇಕು ಎಂದು ಒತ್ತಾಯಿಸಿದರು.

ತಾಲೂಕು ಅಧ್ಯಕ್ಷೆ ರಂಗಮ್ಮ ಅನ್ವರ್, ಕಾರ್ಯದರ್ಶಿ ರಮಾದೇವಿ, ಸಿಐಟಿಯು ಸಂಚಾಲಕ ಗಿರಿಯಪ್ಪ ಪೂಜಾರಿ, ಈಶಮ್ಮ ಊಟಿ, ಚಂದ್ರಕಲಾ, ಶೇಖಮ್ಮ, ಸುಶೀಲಾ, ಯಂಕಮ್ಮ, ಕೌಸರ್‌ಬೇಗಂ, ಜಯಲಕ್ಷ್ಮಿ, ರೇಣುಕಾ ಬೊಮ್ಮನಾಳ, ಸುಜಾತ, ಶ್ರೀದೇವಿ, ಚಂದ್ರಕಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net