ಅಂಗನವಾಡಿ ಕೇಂದ್ರಗಳ ಬಾಗಿಲು ಮುಚ್ಚಿಸುವ ಹುನ್ನಾರ

Untitled design (79)
ದೇವದುರ್ಗದ ಶಾಸಕರ ಕಚೇರಿ ಮುಂಭಾಗ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಪ್ರತಿಭಟನೆ ನಡೆಸಿತು. ತಾಲೂಕಾಧ್ಯಕ್ಷೆ ರಂಗಮ್ಮ ಅನ್ವರ್, ಖಜಾಂಚಿ ಈಶಮ್ಮ, ಸಿಐಟಿಯು ತಾಲೂಕು ಕಾರ್ಯದರ್ಶಿ ಗಿರಿಯಪ್ಪ ಪೂಜಾರಿ, ಪ್ರಮುಖರಾದ ಲಕ್ಷ್ಮೀ ಕುಂಬಾರ, ರಮಾದೇವಿ, ಚಂದ್ರಕಲಾ, ಸಕೀಲಾ, ಶಕುಂತಲಾ, ಭಾರತಿ, ರೇಣುಕಾ, ಜಯಲಕ್ಷ್ಮೀ ಇದ್ದರು.
Published on

ದೇವದುರ್ಗ: ಅಂಗನವಾಡಿ ಕೇಂದ್ರದಲ್ಲಿ ಬಾಲವಿಕಾಸ ಶಿಕ್ಷಣ ಆರಂಭಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು ಸಂಯೋಜಿತ) ಪಟ್ಟಣದ ಶಾಸಕರ ಕಚೇರಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿತು.

ರಾಜ್ಯದ ಅಂಗನವಾಡಿ ಕೇಂದ್ರಗಳು ಗ್ರಾಮೀಣ ಭಾಗದಲ್ಲಿ ಅಪೌಷ್ಟಿಕತೆಯನ್ನು ನಿವಾರಿಸುವಲ್ಲಿ ಶ್ರಮಿಸುತ್ತಿವೆ. ಹಲವು ಗರ್ಭಿಣಿ, ತಾಯಂದಿರು ಹಾಗೂ ಮಕ್ಕಳ ಆರೋಗ್ಯ ಕಾಪಾಡುವಲ್ಲಿ ಕಾಳಜಿವಹಿಸಿವೆ. ಆದರೆ, ಕೇಂದ್ರಗಳಿಗೆ ಸೌಲಭ್ಯ ಕಲ್ಪಿಸಲು ಸರ್ಕಾರ ಹಿಂದೇಟು ಹಾಕುತ್ತಿದೆ. ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ಆರಂಭಿಸುವ ನಿರ್ಧಾರ ಸರಿಯಲ್ಲ. ಈ ಮೂಲಕ ಅಂಗನವಾಡಿ ಕೇಂದ್ರಗಳ ಬಾಗಿಲು ಮುಚ್ಚಿಸುವ ಹುನ್ನಾರ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಸರ್ಕಾರ ತನ್ನ ಆದೇಶ ಹಿಂಪಡೆದು ಅಂಗನವಾಡಿ ಕೇಂದ್ರಗಳಲ್ಲೇ ಎಲ್‌ಕೆಜಿ, ಯುಕೆಜಿ ಶಿಕ್ಷಣ ಆರಂಭಿಸಬೇಕು. ಮಕ್ಕಳ ವಯಸ್ಸಿಗೆ ತಕ್ಕಂತೆ ಕೇಂದ್ರಗಳಿಗೆ ಪೌಷ್ಠಿಕ ಆಹಾರ ಒದಗಿಸಬೇಕು. ಶಿಕ್ಷಣ ಇಲಾಖೆ ಬದಲಾವಣೆ ತರುವಾಗ ಡಬ್ಲ್ಯುಸಿಒ ಇಲಾಖೆ ಒಪ್ಪಿಗೆ ಪಡೆಯಬೇಕು. ಭಾರತ ಬಾಲವಿಕಾಸ ಯೋಜನೆಯಡಿ ಮಕ್ಕಳ ಸ್ಥಿತಿಗತಿ ಬಗ್ಗೆ ಅಧ್ಯಯನ ಮಾಡಬೇಕು. ಶಿಕ್ಷಣ ಇಲಾಖೆಯಡಿ ಇರುವ ಎಲ್‌ಕೆಜಿ ಯುಕೆಜಿ, ಕೆಪಿಎಸ್ ಶಾಲೆಗಳ ಮಕ್ಕಳ ಸ್ಥಿತಿಗತಿ ಬಗ್ಗೆ ಅಧ್ಯಯನ ಮಾಡಬೇಕು ಎಂದು ಒತ್ತಾಯಿಸಿದರು.

ಸಂಘ ತಾಲೂಕಾಧ್ಯಕ್ಷೆ ರಂಗಮ್ಮ ಅನ್ವರ್, ಖಜಾಂಚಿ ಈಶಮ್ಮ, ಸಿಐಟಿಯು ತಾಲೂಕು ಕಾರ್ಯದರ್ಶಿ ಗಿರಿಯಪ್ಪ ಪೂಜಾರಿ, ಪ್ರಮುಖರಾದ ಲಕ್ಷ್ಮೀ ಕುಂಬಾರ, ರಮಾದೇವಿ, ಚಂದ್ರಕಲಾ, ಸಕೀಲಾ, ಶಕುಂತಲಾ, ಭಾರತಿ, ರೇಣುಕಾ, ಜಯಲಕ್ಷ್ಮೀ, ನಿರ್ಮಲಾ, ರಂಗಮ್ಮ, ಬಿನ್ನಮ್ಮ, ರುಕ್ಮೀಣಿ, ರಾಧಿಕಾ, ರಂಗಮ್ಮ, ಸಿದ್ದಮ್ಮ, ಮಂಜುಳಾ, ಲೀಲಾವತಿ, ಮೀರಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net