ಬಸವಾದಿ ಶರಣರ ಮಾರ್ಗದಲ್ಲಿ ನಡೆಯೋಣ

ದೇವದುರ್ಗದ ತಾಲೂಕು ಆಡಳಿತಸೌಧದಲ್ಲಿ ಅಕ್ಕಮಹಾದೇವಿ ಜಯಂತಿ ಆಚರಿಸಲಾಯಿತು. ಗ್ರೇಡ್-2 ತಹಸೀಲ್ದಾರ್ ಭೀಮರಾಯ ಮೇಟಿ, ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ, ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಶೀಖರೇಶ ಪಾಟೀಲ್, ಸಮಾಜದ ಮುಖಂಡರಾದ ಮಲ್ಲನಗೌಡ ಗೆಜ್ಜೆಬಾವಿ, ಚಂದ್ರಶೇಖರ ಪಾಟೀಲ್ ಮಿಯ್ಯಪುರ ಇತರರಿದ್ದರು.

Published on

ದೇವದುರ್ಗ: ಅಕ್ಕಮಹಾದೇವಿ ಶ್ರೀಶೈಲ ಮಲ್ಲಿಕಾರ್ಜುನ ಬಗ್ಗೆ ಅಪಾರ ಭಕ್ತಿಹೊಂದಿದ್ದು, ಅವರ ಅಂಕಿತನಾಮದಲ್ಲಿ ಹಲವು ವಚನಗಳನ್ನು ರಚಿಸಿದ್ದಾರೆ ಎಂದು ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ ಹೇಳಿದರು.

ಪಟ್ಟಣದ ತಾಲೂಕು ಆಡಳಿತಸೌಧದಲ್ಲಿ ಏರ್ಪಡಿಸಿದ್ದ ಶಿವಶರಣೆ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ಅಕ್ಕಮಹಾದೇವಿ ಅನೇಕ ವಚನಗಳನ್ನು ರಚಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ವಚನಗಳು ಸಮಾಜದ ದಾರಿದೀಪವಾಗಿದ್ದು, ಯುವಕರು ಅಧ್ಯಯನ ಮಾಡಬೇಕಿದೆ. ಶರಣರು ತೋರಿರುವ ಮಾರ್ಗದಲ್ಲಿ ಪ್ರತಿಯೊಬ್ಬರೂ ಮುನ್ನಡೆದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.

ಗ್ರೇಡ್-2 ತಹಸೀಲ್ದಾರ್ ಭೀಮರಾಯ ಮೇಟಿ, ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಶೀಖರೇಶ ಪಾಟೀಲ್, ಸಮಾಜದ ಮುಖಂಡರಾದ ಮಲ್ಲನಗೌಡ ಗೆಜ್ಜೆಬಾವಿ, ಚಂದ್ರಶೇಖರ ಪಾಟೀಲ್ ಮಿಯ್ಯಪುರ, ನೌಕರರಾದ ಪ್ರವೀಣ್‌ಕುಮಾರ, ಶ್ರೀಶೈಲ, ಮಲ್ಲಿಕಾರ್ಜುನ, ಕೃಷ್ಣ, ದಂಡಪ್ಪ, ಪಾರ್ವತಿ, ಸರಸ್ವತಿ, ರಂಗಪ್ಪ ಬಲ್ಲಿದವ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net