ದೇವದುರ್ಗದಲ್ಲಿ 31 ಕ್ವಿಂಟಾಲ್ ಪಡಿತರ ಅಕ್ಕಿ ವಶ

Devadurga Illigal Ration Seized
Published on

ದೇವದುರ್ಗ: ಪಟ್ಟಣದ ನೇತಾಜಿ ಕಾಲನಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 1.10 ಲಕ್ಷ ರೂ. ಮೌಲ್ಯದ 31 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಪೊಲೀಸರು ಸೋಮವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ. ಲಿಂಗಸುಗೂರು ವಿಭಾಗದ ಡಿವೈಎಸ್‌ಪಿ ಎಸ್.ಹುಲ್ಲೂರು ನೇತೃತ್ವದಲ್ಲಿ ಸಿಪಿಐ ಆರ್.ಎಂ.ನದಾಫ್, ಪಿಎಸ್‌ಐ ಎಲ್.ಬಿ.ಅಗ್ನಿ ದಾಳಿ ನಡೆಸಿದ್ದರು. ಬಸವರಾಜ, ಶ್ರೀಕಾಂತ, ರಂಗರೆಡ್ಡಿ ಎಂಬುವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net