ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ದೇವದಾಸಿ ಸಂಘದಿAದ ಪ್ರತಿಭಟನೆ

DEVADASI
DEVADASI
Published on

ರಾಯಚೂರು ದೇವದಾಸಿ ಮಹಿಳೆಯರಿಗೆ ಮಾಸಿಕ ಪಿಂಚಣಿಯನ್ನು ೩ ಸಾವಿರ ರೂಗಳಿಗೆ ಹೆಚ್ಚಿಸುವದು ಹಾಗೂ ದೇವದಾಸಿಯರ ಸಮೀಕ್ಷೆಗೆ ಅಂಗನವಾಡಿ ಕೇಂದ್ರಗಳ ಮೂಲಕ ನಡೆಸುವದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಈಡೇರಿಕೆಗೆ ಒತ್ತಾಯಿಸಿ ಮಂಗಳವಾರ ದೇವದಾಸಿ ಮಹಿಳೆಯರ ವಿಮೋಚನಾ ಸಂಘದಿAದ ನಗರದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಮಾಡಲಾಗಿತು.

ದೇವದಾಸಿ ಮಹಿಳೆಯುರು ಕುಟುಂಬ ಸಮೇತರಾಗಿ ಆನ್‌ಲೈನ್ ಮೂಲಕ ನೊಂದಾಯಿಸುವ ಕಷ್ಟವಾಗಿದು ಅಂಗನವಾಡಿ ಕೇಂದ್ರಗಳ ಮೂಲಕ ಸಮೀಕ್ಷೆ ಮಾಹಿತಿ ನೀಡುವ ವ್ಯವಸ್ಥೆ ಜಾರಿಗೊಳಿಸಬೇಕು. ದೇವದಾಸಿ

ಮಹಿಳೆಯರಿಗೆ ಸ್ವಯಂ ಉದ್ಯೋಗಕ್ಕಾಗಿ ೧.೫೦ ರೂ ಆರ್ಥಿಕ ನೆರವು ನೀಡುವ ಯೋಜನೆ ಜಾರಿಗೊಳಿಸಬೇಕು.

ಉಚಿತ ನಿವೇಶನ ಹಂಚಿಕೆ ಜೆಮನೆಯನ್ನು ನಿರ್ಮಿಸಲು ಯೋಜನೆ ರೂಪಿಸಬೇಕು. ರಾಜೀವಗಾಂಽ ವಸತಿ ನಿಗಮದಿಂದ ನಿರ್ಮಿಸಲಾಗುತ್ತಿರುವ ಮನೆಗಳಿಗೆ ವಂತಿಗೆ ಹಣ -Àಲಾನುಭವಿಗಳು ತುಂಬುವAತೆ ಕೇಳಲಾಗುತ್ತಿದೆ. ಹಣ ಪಾವತಿಸು ಶಕ್ತಿ ದೇಸದಾಸಿ ಮಹಿಳೆಯರಿಂದ ಸಾಧ್ಯವಾಗುವದಿಲ್ಲ. ಸರ್ಕಾರವೇ ವಂತಿಗೆ ಹಣ ತುಂಬಿ ಮನೆ ನಿರ್ಮಿಸಿಕೊಡಬೇಕು. ದೇವದಾಸಿ ಮಹಿಳೆಯರ ಕುಟುಂಬಕ್ಕೆ ಐದು ಎಕರೆ ನೀರಾವರಿಭೂಮಿ ಒದಗಿಸಬೇಕು ಎಂದು ಒತ್ತಾಯಿಸಿದರು.

ಈ ಸಂರ್ದದಲ್ಲಿ ಸಂಘಟನೆ ಗೌರವಾಧ್ಯಕ್ಷ ಕೆ.ಜಿ.ವೀರೇಶ, ಅಧ್ಯಕ್ಷೆ ಎಚ್.ಪದ್ಮಾ, ಕಾರ್ಯದರ್ಶಿ ತಾಯಮ್ಮ, ರೇಣುಕಮ್ಮ,ಮುತ್ತಮ್ಮ ಸೇರಿದಂತೆ ಅನೇಕ ಮಹಿಳೆಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net