ದೇವದಾಸಿ ಮಹಿಳೆಯರ ಕುಟುಂಬ ಗಣತಿ ನಡೆಯಲಿ

devadasi issue koppal memorandum submission to dc koppal
ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಸಂದ ಜಿಲ್ಲಾ ಸಮಿತಿ ಪದಾಧಿಕಾರಿಗಳು ಬುಧವಾರ ಡಿಸಿ ಆಪ್ತ ಸಹಾಯಕಿ ಜಯಲಕ್ಷಿ$್ಮಗೆ ಮನವಿ ಸಲ್ಲಿಸಿದರು. ಸದಸ್ಯರಾದ ಮಂಜುನಾಥ ಡಗ್ಗಿ, ರಮೇಶ್​ ಬಡಿಗೇರ್​, ಹುಲಿಗೆಮ್ಮ, ಸುಂಕಪ್ಪ ಗದಗ, ಯಲ್ಲಪ್ಪ ಸೂಳೆಕಲ್​, ಯಮನೂರ ಡಗ್ಗಿ, ವೀರಭದ್ರ ಗಂಗಾವತಿ, ರಮೇಶ್​ ಕೊಪ್ಪಳ, ಹುಲುಗಪ್ಪ ಗೋಕಾವಿ ಇತರರಿದ್ದರು.
Published on

ಕೊಪ್ಪಳ: ದೇವದಾಸಿ ಮಹಿಳೆಯರ ಕುಟುಂಬದ ಗಣತಿ ನಡೆಸುವಂತೆ ಒತ್ತಾಯಿಸಿ ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಸಂದ ಜಿಲ್ಲಾ ಸಮಿತಿ ಪದಾಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿ ನಲಿನ್​ ಅತುಲ್​ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಸಾಮಾಜಿಕ ದೌರ್ಜನ್ಯಕ್ಕೆ ತುತ್ತಾದ ಒಂದು ಲಕ್ಷಕ್ಕೂ ಅಧಿಕ ದೇವದಾಸಿ ಮಹಿಳೆಯರ ಕುಟುಂಬಗಳಿವೆ. ದೇಶಕ್ಕೆ ಸ್ವಾತಂತ್ರ$್ಯ ಬಂದು 76 ವರ್ಷಗಳಾಗಿವೆ. ದಲಿತರ ಅಭಿವೃದ್ಧಿ ಹೆಸರಿನಲ್ಲಿ ಲಾಂತರ ಕೋಟಿ ರೂ. ರ್ಖಚಾಗಿದೆ. ಆದರೂ ನಮ್ಮ ಅಭಿವೃದ್ಧಿ ಆಗಿಲ್ಲ. ದೌರ್ಜನ್ಯ ನಿಂತಿಲ್ಲ. ಗವರವ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಹಂಬಲಿಸುವಂತಾಗಿದೆ. ಸರ್ಕಾರಗಳು ದೇವದಾಸಿಯರ ಅಸಮರ್ಪಕ ಗಣಿತಿ ನಡೆಸಿವೆ. ಮರು ಗಣತಿ ಮಾಡುತ್ತಿಲ್ಲ. ಇದರಿಂದ ಅನೇಕರು ಸರ್ಕಾರಿ ಸೌಲಭ್ಯದಿಂದ ವಂಚಿತರಾಗುತ್ತಿದ್ದೇವೆ. ತಾಯಂದಿರ ಸಾವಿನಿಂದ ಮಕ್ಕಳು ಅನಾಥರಾಗುತ್ತಿದ್ದೇವೆಂದು ಅಳಲು ತೋಡಿಕೊಂಡರು.

ದೇವದಾಸಿ ಮಹಿಳೆ ಕುಟುಂಬಗಳ ಗಣತಿ ನಡೆಸಿ. ಪಜಾ ಅನುದಾನದಲ್ಲಿ ಶೇ.10ರಷ್ಟು ಮೀಸಲಿರಿಸಿ. ಎಲ್ಲ ದೇವದಾಸಿ ಮಕ್ಕಳಿಗೆ ಗುರುತು ಪತ್ರ ನೀಡಿ. ಮಾಸಾಶನ 6 ಸಾವಿರ ರೂ.ಗೆ ಹೆಚ್ಚಿಸಿ. ದೌರ್ಜನ್ಯದಿಂದ ದೇವದಾಸಿ ಪದ್ಧತಿಗೆ ದೂಡುವುದು ತಡೆಯಬೇಕು. ದೇವದಾಸಿ ಮಕ್ಕಳಿಗೆ ಎಲ್ಲ ಹಂತದ ಶಿಕ್ಷಣ ಉಚಿತ ನೀಡಿ. ವಿದ್ಯಾವಂತ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ ನೀಡಿ. ಷರತ್ತುಗಳಿಲ್ಲದೇ 5 ಲಕ್ಷ ರೂ. ವಿವಾಹ ಪ್ರೋತ್ಸಾಹಧನ ನೀಡಬೇಕೆಂದು ಒತ್ತಾಯಿಸಿದರು.

ಸದಸ್ಯರಾದ ಮಂಜುನಾಥ ಡಗ್ಗಿ, ರಮೇಶ್​ ಬಡಿಗೇರ್​, ಹುಲಿಗೆಮ್ಮ, ಸುಂಕಪ್ಪ ಗದಗ, ಯಲ್ಲಪ್ಪ ಸೂಳೆಕಲ್​, ಯಮನೂರ ಡಗ್ಗಿ, ವೀರಭದ್ರ ಗಂಗಾವತಿ, ರಮೇಶ್​ ಕೊಪ್ಪಳ, ಹುಲುಗಪ್ಪ ಗೋಕಾವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net