

ಕೊಟ್ಟೂರು: ಜನರು ಪ್ರಜ್ಞಾವಂತರಾಗಿರುವುದರಿಂದ ದೇವದಾಸಿ ಪದ್ಧತಿ ಗಣನೀಯವಾಗಿ ಇಳಿಕೆಯಾಗಿದೆ ಎಂದು ಡಾ.ಸುಲೋಚನಾ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದೇವದಾಸಿ ಪುನರ್ವಸತಿ ಯೋಜನೆ ಸಹಯೊಗದಲ್ಲಿ ಹಮ್ಮಿಕೊಂಡಿದ್ದ ವಿಮುಕ್ತ ದೇವದಾಸಿಯರ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಇದನ್ನೂ ಓದಿ: ವಿಮುಕ್ತ ದೇವದಾಸಿಯರಿಗೆ ಪುನರ್ವಸತಿ ಸೌಲಭ್ಯ ಕಲ್ಪಿಸಿ
ದೇವರ ಹೆಸರಿನಲ್ಲಿ ಮಹಿಳೆಯರನ್ನು ದಾಸಿಯನ್ನಾಗಿ ಮಾಡುವುದನ್ನು ಸರ್ಕಾರ ನಿಷೇಧಿಸಿದೆ. ದೇವದಾಸಿ ಪದ್ಧತಿ ಪ್ರೋತ್ಸಾಹಿಸಿದವರಿಗೆ ಶಿಕ್ಷೆ ನೀಡುವ ಕಾನೂನು ಜಾರಿಯಲ್ಲಿದೆ. ಈ ಪದ್ಧತಿ ಪೂರ್ಣ ಪ್ರಮಾಣದಲ್ಲಿ ಕೊನೆಗಾಣಬೇಕು. ಆಗ ಸ್ವಚ್ಛ ಸಮಾಜ ನಿರ್ಮಾಣ ಸಾಧ್ಯ. ವಿಮುಕ್ತ ದೇವದಾಸಿಯರು ಆರ್ಥಿಕವಾಗಿ ಹಿಂದುಳಿದಿದ್ದು, ಅವರ ಆರೋಗ್ಯ ಕಾಳಜಿಯಿಂದ ಸರ್ಕಾರ ಈ ಉಚಿತ ಆರೋಗ್ಯ ಶಿಬಿರ ಆಯೋಜನೆ ಮಾಡಿದೆ ಎಂದರು.
ದೇವದಾಸಿ ಪುನರ್ವಸತಿ ಯೋಜನೆ ತಾಲೂಕು ಅನುಷ್ಠಾನ ಅಧಿಕಾರಿ ಹನುಮಂತಪ್ಪ, ಐಸಿಟಿಸಿ ಕೌನ್ಸೆಲರ್ ಜಿ.ಎಂ.ಮಹಾಂತೇಶ, ಲ್ಯಾಬ್ ಟೆಕ್ನಿಷಿಯನ್ ಎನ್.ಬಸವರಾಜ್, ಸಿಡಿ ಕೌನ್ಸೆಲರ್ ಚೆನ್ನಯ್ಯ, ದೇವದಾಸಿ ಕ್ಷೇಮಾಭಿವೃದ್ಧಿ ಒಕ್ಕೂಟದ ರಾಜ್ಯ ಕಾರ್ಯದರ್ಶಿ ರೇಣುಕಮ್ಮ, ತಾಲೂಕು ಅನುಷ್ಠಾನಾಧಿಕಾರಿ ಎಂ.ಹನುಮಂತಪ್ಪ ಮುಂತಾದವರಿದ್ದರು.