

ರಾಮದುರ್ಗ: ದೃಢ ಸಂಕಲ್ಪ ಹಾಗೂ ಆತ್ಮವಿಶ್ವಾಸವಿದ್ದಲ್ಲಿ ಮಾತ್ರ ನಿಖರ ಗುರಿ ತಲುಪಲು ಸಾಧ್ಯವಿದೆ ಎಂದು ಬನಹಟ್ಟಿಯ
ಎಸ್ಟಿಸಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಎಸ್.ಬಿ. ಮಟೋಳಿ ಹೇಳಿದರು.
ಪಟ್ಟಣದ ವಿದ್ಯಾ ಪ್ರಸಾರಕ ಸಮಿತಿಯ ಶ್ರೀಮತಿ ಎಸ್.ವೈ. ಕುಲಗೋಡ ಪಿಯು ಕಾಲೇಜಿನಲ್ಲಿ ಪ್ರಸಕ್ತ ಸಾಲಿನ ಕ್ರೀಡಾ ಹಾಗೂ ವಿವಿಧ ಸಂಗಳ ಚಟುವಟಿಕೆಗಳ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಅಧ್ಯತೆ ವಹಿಸಿದ್ದ ವಿದ್ಯಾ ಪ್ರಸಾರಕ ಸಮಿತಿ ಅಧ್ಯ ಎಸ್.ಎಸ್.ಸುಲ್ತಾನಪುರ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಸರ್ವಾಂಗೀಣ ಅಭಿವದ್ಧಿ ಹೊಂದಬೇಕು ಎಂದರು.
ಸಮಿತಿ ಸದಸ್ಯರಾದ ಡಾ. ವೈ.ಬಿ. ಕುಲಗೋಡ, ವಿ.ಜಿ. ಬೈಲವಾಡ, ಪಿ.ಎಂ. ಪಟ್ಟಣ, ಎಸ್.ಜಿ. ಮಾಳವಾಡ, ಶಿವಾನಂದ ಚಿಕ್ಕೋಡಿ, ಪ್ರೊ. ಎಸ್.ಎಂ. ಸಕ್ರಿ, ಜಮಾಖಾನಾ ಉಪಾಧ್ಯ ಆರ್.ಸಿ. ತಡಗಣಿ ಇತರರಿದ್ದರು. ಎಂ.ಬಿ. ಪಾಟೀಲ ಸ್ವಾಗತಿಸಿದರು. ಬಿ.ಆರ್. ಪಮ್ಮಾರ ಪರಿಚಯಿಸಿದರು. ಡಾ. ವಿ.ಬಿ. ವಗ್ಗರ ನಿರೂಪಿಸಿದರು. ಅಬಕರಿ ಮನಿಯಾರ ವಂದಿಸಿದರು.