ಸ್ಮಶಾನ ಒತ್ತುವರಿಯಾಗದಂತೆ ಸ್ಥಳ ನಿಗಧಿಪಡಿಸಿ

ಮರಿಯಮ್ಮನಹಳ್ಳಿ ರುದ್ರಭೂಮಿಯಲ್ಲಿ 14ನೇ ವಾರ್ಡಿನ ಸಾರ್ವಜನಿಕರು ಒತ್ತುವರಿ ಜಮೀನು ತೆರವುಗೊಳಿಸುವಂತೆ ಪ್ರತಿಭಟನೆ ನಡೆಸಿದರು. ಪಪಂ ಸದಸ್ಯ ಮರಡಿ ಸುರೇಶ, ಪ್ರಮುಖರಾದ ಎಂ.ರಾಮಾಂಜನೇಯ, ನಾಗರಾಜ, ತಳವಾರ್ ಹನುಮಂತಪ್ಪ, ಬಿ.ರಾಮಪ್ಪ, ಬಿ.ವೆಂಕಟೇಶ್ ಇತರರಿದ್ದರು.
ಮರಿಯಮ್ಮನಹಳ್ಳಿ ರುದ್ರಭೂಮಿಯಲ್ಲಿ 14ನೇ ವಾರ್ಡಿನ ಸಾರ್ವಜನಿಕರು ಒತ್ತುವರಿ ಜಮೀನು ತೆರವುಗೊಳಿಸುವಂತೆ ಪ್ರತಿಭಟನೆ ನಡೆಸಿದರು. ಪಪಂ ಸದಸ್ಯ ಮರಡಿ ಸುರೇಶ, ಪ್ರಮುಖರಾದ ಎಂ.ರಾಮಾಂಜನೇಯ, ನಾಗರಾಜ, ತಳವಾರ್ ಹನುಮಂತಪ್ಪ, ಬಿ.ರಾಮಪ್ಪ, ಬಿ.ವೆಂಕಟೇಶ್ ಇತರರಿದ್ದರು.
Published on

ಮರಿಯಮ್ಮನಹಳ್ಳಿ: ರುದ್ರಭೂಮಿ ಒತ್ತುವರಿ ಜಮೀನು ತೆರವುಗೊಳಿ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿ ಪಟ್ಟಣದ 14ನೇ ವಾರ್ಡಿನ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.

ಪಟ್ಟಣದ ಸರ್ವೇ ನಂಬರ್ 122/3 ರ ಜಮೀನಿನಲ್ಲಿ ಪೂರ್ವಜರ ಕಾಲದಿಂದಲೂ ಶವಸಂಸ್ಕಾರ ಮಾಡಲಾಗುತ್ತಿದೆ. ಇಲಾಖೆ ಅಧಿಕಾರಿಗಳಿಗೆ ಈ ಭೂಮಿಯನ್ನೂ ರುದ್ರಭೂಮಿಗೆ ಮೀಸಲಿಡುವಂತೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸಿಲ್ಲ. 2009ರಲ್ಲಿ ಸರ್ವೇ ಕಾರ್ಯ ನಡೆಸಿ 4 ಎಕರೆ ಜಾಗವನ್ನು ಮಿಸಲಿಡುವಂತೆ ವರದಿ ನೀಡಿದ್ದರು. ಆದರೆ, ಸ್ಮಶಾನಕ್ಕೆ ಯಾವುದೇ ದಾಖಲೆ ಇಲ್ಲದ ಕಾರಣ ಕೆಲವರು ಅದರ ಪಕ್ಕದ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಶವಸಂಸ್ಕಾರಕ್ಕೆ ಸ್ಥಳ ಇಲ್ಲದಂತಾಗುತ್ತದೆ. ಆದ್ದರಿಂದ ಮರು ಸರ್ವೇ ನಡೆಸಿ ಸ್ಮಶಾನ ಒತ್ತುವರಿಯಾಗದಂತೆ ಸ್ಥಳ ನಿಗಧಿ ಮಾಡಬೇಕು ಎಂದು ಆಗ್ರಹಿಸಿದರು.

ಅಮೃತ್ 2 ಯೋಜನೆಯ ಶುದ್ಧ ಕುಡಿವ ನೀರಿನ ಘಟಕದ ಕಾಮಗಾರಿ ಪೂರ್ವಜರ ಸಮಾಧಿಗಳ ಮೇಲೆ ನಡೆಯುತ್ತಿದೆ. ಅಂದಾಜು 1.5 ಎಕರೆ ಪ್ರದೇಶದಲ್ಲಿ 10 ರಿಂದ 15ಅಡಿ ಎತ್ತರ ಮಣ್ಣು, ಕಲ್ಲುಗಳನ್ನು ಸಮಾಧಿಗಳ ಮೇಲೆ ಹಾಕಲಾಗಿದ್ದು, ಗುತ್ತಿಗೆದಾರರು ಸಮಾಧಿಗಳಿಗೆ ಹಾನಿಯಾಗದಂತೆ ತೆರವುಗೊಳಿಸಿ ಎಂದು ಸೂಚನೆ ನೀಡಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಪಪಂ ಸದಸ್ಯ ಮರಡಿ ಸುರೇಶ, ಪ್ರಮುಖರಾದ ಎಂ.ರಾಮಾಂಜನೇಯ, ನಾಗರಾಜ, ತಳವಾರ್ ಹನುಮಂತಪ್ಪ, ಬಿ.ರಾಮಪ್ಪ, ಬಿ.ವೆಂಕಟೇಶ್, ಎಂ.ಅಂಜಿನಪ್ಪ, ಬಿ.ಗಾಳೆಪ್ಪ, ಟಿ.ಹನುಮಂತ, ಗಂಗಾಧರ, ತಳವಾರ ದುರುಗಪ್ಪ, ದುರುಗಪ್ಪ, ರಾಮಪ್ಪ, ರವಿ, ಹರೀಶ್, ಸೋಮಪ್ಪ, ಲಕ್ಷ್ಮೀದೇವಿ, ಶಾರದಮ್ಮ, ಹುಲಿಗೆಮ್ಮ, ಅಂಜಿನಮ್ಮ, ಸೋಮಕ್ಕ ರೇಣುಕಮ್ಮ, ನಿಂಗಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net