ಯೋಗ, ಧ್ಯಾನದಿಂದ ಸಂಕಲ್ಪ ಸಿದ್ಧಿ

ANKOLA YOGA
Published on

ಅಂಕೋಲಾ: ಸಂಕಲ್ಪದೊಳಗೆ ಮಹಾಶಕ್ತಿ ಇದೆ. ನಿಷ್ಕಲ್ಮಶ ಮನಸಿನಿಂದ ಪ್ರತಿದಿನ ಮಾಡುವ ಯೋಗ, ಧ್ಯಾನದಿಂದ ಸಂಕಲ್ಪ ಸಿದ್ಧಿ ಪ್ರತಿಯೊಬ್ಬರ ಜೀವನದಲ್ಲಿ ಆಗುತ್ತದೆ ಎಂದು ಪತಂಜಲಿ ಯೋಗಪೀಠ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ಹೇಳಿದರು.

ಅಂಕೋಲಾ ಪತಂಜಲಿ ಯೋಗ ಸಮಿತಿ ಆಶ್ರಯದಲ್ಲಿ ಪಟ್ಟಣದ ಅರ್ಬನ್ ಬ್ಯಾಂಕ್ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಅಡ್ವಾನ್ಸ್ ಯೋಗ ತರಬೇತಿ ಶಿಬಿರದ ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಹಕ್ಕೆ ವಿಟಮಿನ್ ಪಡೆಯಲು ಆಹಾರ ಹೇಗೆ ಅಗತ್ಯವಿದೆಯೊ ಮನಸು ಮತ್ತು ಆತ್ಮಕ್ಕೆ ಆಹಾರಬೇಕು. ಅದು ಯೋಗಾಸನ ಪ್ರಾಣಾಯಾಮ ಧ್ಯಾನದಿಂದ ಮಾತ್ರ ಸಾಧ್ಯವಿದೆ ಎಂದರು.

ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಶೆಟ್ಟಿ, ಜಿಲ್ಲಾ ಪ್ರಭಾರಿ ಶ್ರೀನಾಥ, ಕಿಸಾನ ಜಿಲ್ಲಾ ಪ್ರಭಾರಿ ನಾಗೇಂದ್ರ ಭಟ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಘುರಾಮ ಹೆಗಡೆ, ಸೋಮಪ್ರಕಾಶ ಶೇಟ್ ಶಿರಸಿ, ಡಾ. ವಿಜಯದೀಪ ಮಣಿಕೋಠ, ಸೋಶಿಯಲ್ ಮಿಡಿಯಾ ಪ್ರಭಾರಿ ಸ್ಮಿತಾ ರಾಯಚೂರು, ಇತರರು ಉಪಸ್ಥಿತರಿದ್ದರು.

ಅಂಕೋಲಾ ತಾಲೂಕು ಪ್ರಭಾರಿ ವಿನಾಯಕ ಗುಡಿಗಾರ ಕಾರ್ಯಕ್ರಮ ನಿರ್ವಹಿಸಿದರು. ನಿರೂಪಮಾ ಶ್ಯಾಮಸುಂದರ ಪ್ರಾರ್ಥಿಸಿದರು. ಶಿಬಿರಾರ್ಥಿಗಳಿಂದ ಯೋಗ ಗುರುಗಳಿಗೆ ಗೌರವಾರ್ಪಣೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net