

ಮೈಸೂರು: ಗುರಿ ಸಾಧನೆಗೆ ಹಲವಾರು ಅಡ್ಡಿಗಳು ಎದುರಾಗುತ್ತವೆ. ಅವುಗಳನ್ನು ದೃಢ ನಿಶ್ಚಯಿಂದ ಎದುರಿಸಿ, ಮುಂದೆ ಸಾಗಬೇಕು ಎಂದು ಭಾರತೀಯ ವಾಯುಸೇನೆಯ ಗ್ರೂಪ್ ಕ್ಯಾಪ್ಟನ್ ಡಾ.ವಿನಯ್ ವಿಠ್ಠಲ್ ಸಲಹೆ ನೀಡಿದರು.
ಕುವೆಂಪುನಗರದಲ್ಲಿ ತಪೋನಂದನ ಉದ್ಯಾನವನ ಬಳಗವು ಭಾನುವಾರ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಸಂವಿಧಾನದ ಆಶಯದಂತೆ ಎಲ್ಲರೂ ನಡೆದುಕೊಳ್ಳಬೇಕು. ಆ ಮೂಲಕ ಪ್ರತಿಯೊಬ್ಬರೂ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ದೊಡ್ಡ ದೊಡ್ಡ ಕನಸು ಕಾಣಬೇಕು. ಅದನ್ನು ನನಸು ಮಾಡಿಕೊಳ್ಳಲು ಶ್ರಮ ಹಾಕಬೇಕು ಎಂದು ಹೇಳಿದರು.
ಕಾರ್ಗಿಲ್ ಯುದ್ಧ ಸಂದರ್ಭದಲ್ಲಿ ಎದುರಾದ ಸಂಕಷ್ಟಗಳನ್ನು ವಿವರಿಸಿದ ಅವರು, ನಾವು ಎದೆಗುಂದಲಿಲ್ಲ. ಧೆರ್ಯದಿಂದ ಯುದ್ಧ ಮಾಡಿದೆವು. ಪರಿಣಾಮ ನಾವು ವಾಪಸ್‌ಬರುವಾಗ ಜೆ ಹಿಂದೂಸ್ತಾನ್‌ಘೋಷಣೆ ಕೇಳಿ ಪುಳಕಿತರಾದೆವು ಎಂದರು.
ಮಾಜಿ ಮೇಯರ್ ಶಿವಕುಮಾರ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಅತ್ಯುತ್ತಮವಾದ ಸಂವಿಧಾನವನ್ನು ನೀಡಿದ್ದಾರೆ. ಕರಡು ಸಮಿತಿಯಲ್ಲಿ ಏಳು ಮಂದಿ ಇದ್ದರೂ ಮೂವರು ಗೆರಾದರೂ ಅಂಬೇಡ್ಕರ್‌ಅವರು ತಮ್ಮಗಿದ್ದ ಅಪಾರ ಜ್ಞಾನದಿಂದಾಗಿ ಎಲ್ಲರಿಗೂ ಅನುಕೂಲವಾಗುವ ಸಂವಿಧಾನವನ್ನು ನೀಡಿದ್ದಾರೆ ಎಂದರು.
ಆದರೆ ಅಂಬೇಡ್ಕರ್‌ಅವರಿಗೆ ಸಲ್ಲಬೇಕಾದ ಗೌರವಗಳು ಸರಿಯಾಗಿ ಸಿಗಲಿಲ್ಲ. ಮೃತಪಟ್ಟಾಗ ದೆಹಲಿಯಲ್ಲಿ ಅಂತ್ಯಸಂಸ್ಕಾರಕ್ಕೆ ಜಾಗ ನೀಡಲಿಲ್ಲ. ಭಾರತರತ್ನ ನೀಡಲು 1990ರವರೆಗೆ ಕಾಯಬೇಕಾಯಿತು. ಆದರೆ ಈಗಿನ ಪ್ರಧಾನಿಯವರು ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಕ್ಷೇತ್ರಗಳನ್ನು ಪಂಚತೀರ್ಥ ಕ್ಷೇತ್ರಗಳಾಗಿ ಅಭಿವೃದ್ಧಿಪಡಿಸಿದ್ದಾರೆ ಎಂದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ದೇಶದ ಪ್ರತಿಯೊಬ್ಬರೂ ಆಚರಿಸುವ ಹಬ್ಬಗಳೆಂದರೆ ಗಣ ರಾಜ್ಯೋತ್ಲವ ಹಾಗೂ ಸ್ವಾತಂತ್ರ್ಯೋತ್ಸವ. ಪ್ರತಿಯೊಬ್ಬರೂ ಸ್ವಾತಂತ್ರ್ಯದ ಮಹತ್ವ ಅರಿಯಬೇಕು. ಅದು ಸ್ವೆಚ್ಛಾಚಾರವಾಗಬಾರದು ಎಂದರು.
ಮಕ್ಕಳಿಗೆ ಸಂಸ್ಕಾರ, ನೆತಿಕತೆ ಕಲಿಸಬೇಕು. ಗುರುಹಿರಿಯರಿಗೆ ಗೌರವ ನೀಡಬೇಕು. ಸ್ವಾತಂತ್ರೃಕ್ಕಾಗಿ ತ್ಯಾಗ, ಬಲಿದಾನ ಮಾಡಿದವರನ್ನು ಸದಾ ಸ್ಮರಿಸಬೇಕು. ಸೈನಿಕ ಹಾಗೂ ರೈತರಿಗೆ ಗೌರವ ನೀಡಬೇಕು ಎಂದು ಹೇಳಿದರು.
ಮೆಡಿವೇವ್ ಫರ್ಟಿಲಿಟಿ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಸಿ.ಶರತ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ವಿಶೇಷಚೇತನರಿಗೆ ಗಾಲಿ ಕುರ್ಚಿಗಳು ಹಾಗೂ ಕೃತಕ ಕಾಲುಗಳನ್ನು ವಿತರಿಸಲಾಯಿತು. ಕೃತಕ ಕಾಲುಗಳನು ್ನಸಿ.ರಾಮಣ್ಣ, ಅವರ ಮೊಮ್ಮಗ ಗುಹಾನ್, ಎನ್. ನಾಗರಾಜ, ಗಾಲಿ ಕುರ್ಚಿಗಳನ್ನು ಡಾ.ರೂಪಾ ಪ್ರಕಾಶ್, ಡಾ.ಯೋಗಿತಾ, ಡಾ.ಶಿವಾಂಬಿಕಾ, ಕೊಡುಗೆಯಾಗಿ ನೀಡಿದರು. ಆಯೋಜಕರಾದ ಪುರುಷೋತ್ತಮ, ಎಂ. ಜಯಶಂಕರ್ , ಕಾರ್ತಿಕ್, ಸರೋಜಾ, ರಾಮಕೃಷ್ಣೇಗೌಡ, ಎಂ.ರಾಮಪ್ಪ ಇತರರು ಇದ್ದರು.