ಗಾಂಜಾ ಸಾಗಿಸುತ್ತಿದ್ದವನ ಬಂಧನ

CRIME
Published on

ಹನೂರು: ತಮಿಳುನಾಡಿನಲ್ಲಿ ಮಾರಾಟ ಮಾಡಲು ಒಣಗಾಂಜಾ ಕೊಂಡೊಯ್ಯುತಿದ್ದ ವ್ಯಕ್ತಿಯನ್ನು ತಾಲೂಕಿನ ನಾಲ್‌ರೋಡ್ ಸಮೀಪ ಬುಧವಾರ ರಾಮಾಪುರ ಪೋಲಿಸರು ಬಂಧಿಸಿದ್ದಾರೆ.

ತಮಿಳುನಾಡಿನ ಸೇಲಂ ಜಿಲ್ಲೆ ಶೆಟ್ಟಿಯೂರು ಗ್ರಾಮದ ಸುಬ್ರಮಣಿ ಎಂಬುವರ ಪುತ್ರ ಕನಕರಾಜು (60) ಬಂಧಿತ ವ್ಯಕ್ತಿ.

ಬುಧವಾರ ಮಧ್ಯಾಹ್ನ 2ಗಂಟೆ ವೇಳೆಯಲ್ಲಿ ಒಣಗಾಂಜಾವನ್ನು ಮಾರುವ ಉದ್ದೇಶದಿಂದ ಕನಕರಾಜು ಅಕ್ರಮವಾಗಿ ಸಾಗಿಸುತ್ತಿದ್ದ ಎನ್ನಲಾಗಿದೆ.

ಈ ಬಗ್ಗೆ ಖಚಿತ ಮಾಹಿತಿ ಪಡೆದ ರಾಮಾಪುರ ಠಾಣೆ ಇನ್ಸ್‌ಪೆಕ್ಟರ್ ಮನೋಜ್‌ಕುಮಾರ್ ಹಾಗೂ ಸಿಬ್ಬಂದಿ ನಾಲ್‌ರೋಡ್ ಸಮೀಪದ ಎಪಿಎಂಸಿ ಚೆಕ್‌ಪೋಸ್ಟ್ ಬಳಿ ಆತನ ಬ್ಯಾಗ್ ಪರಿಶೀಲಿಸಿದಾಗ ಗಾಂಜಾ ಇರುವುದು ಪತ್ತೆಯಾಗಿದೆ.

ಬಳಿಕ ಚೀಲದಲ್ಲಿದ್ದ 6 ಕೆಜಿ ಗಾಂಜಾವನ್ನು ವಶಪಡಿಸಿಕೊಂಡ ಪೋಲಿಸರು, ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಯಚರಣೆಯಲ್ಲಿ ಮುಖ್ಯಪೇದೆಗಳಾದ ಲಿಂಗರಾಜು, ನಾಗೇಂದ್ರ, ಮಾದೇಶ್, ಶಿವಮೂರ್ತಿ, ಪೇದೆಗಳಾದ ಬೊಮ್ಮೇಗೌಡ, ರಘು, ಅಣ್ಣಾದೂರೈ, ಮನೋಹರ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net