ಲಾಂಗ್​ನಿಂದ ಕೇಕ್ ಕತ್ತರಿಸಿದವನ ಬಂಧನ

29GTL2
Published on

ಗುತ್ತಲ: ಜನ್ಮದಿನದ ಆಚರಣೆ ವೇಳೆ ಯುವಕನೊಬ್ಬ ಲಾಂಗ್​ನಿಂದ ಕೇಕ್ ಕಟ್ ಮಾಡಿರುವ ಘಟನೆ ಹೊಸರಿತ್ತಿಯ ಉರ್ದು ಶಾಲಾ ಆವರಣದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಹೊಸರಿತ್ತಿ ಗ್ರಾಮದ ಮಹಮ್ಮದ್ ಸಾಧಿಕ್ ಹವಾಲ್ದಾರ ಎಂಬ ಯುವಕ 4 ದಿನಗಳ ಹಿಂದೆ ರಾತ್ರಿ ಜನ್ಮದಿನದ ಆಚರಣೆ ವೇಳೆ ಸಾಲು ಸಾಲಾಗಿ 8 ಕೇಕ್​ಗಳನ್ನು ಇಟ್ಟು ಲಾಂಗ್​ನಿಂದ ಕಟ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೃಶ್ಯವನ್ನು ನೋಡಿದ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಮ್ಮದ್ ಸಾಧಿಕ್​ನನ್ನು ಬಂಧಿಸಲಾಗಿದೆ. ಸರ್ಕಾರಿ ಉರ್ದು ಶಾಲೆಯ ಆವರಣದಲ್ಲಿ ಮಾರಾಕಾಸ್ತ್ರಗಳನ್ನು ಬಳಸಿ ಜನ್ಮದಿನ ಆಚರಿಸಿರುವುದಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಇದೇ ರೀತಿಯಲ್ಲಿ ಗ್ರಾಮದ ಯುವಕನೊಬ್ಬ ಸಹ ತನ್ನ ಜನ್ಮದಿನವನ್ನು ಆಚರಿಸಿಕೊಂಡಿದ್ದ. ಇದರಿಂದ ಪ್ರೇರಣೆಗೊಂಡ ಸಾಧಿಕ್ ಸಹ ಆಚರಿಸಿಕೊಂಡಿದ್ದಾಗಿ ತಿಳಿದು ಬಂದಿದೆ.



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net