ಬುರ್ಖಾ ಧರಿಸಿ, ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಯುವಕನ ಬಂಧನ; ಈತನ ಬಳಿ ಹಣವೂ ಇತ್ತು

Arrest vvani
Published on

ಹುಬ್ಬಳ್ಳಿ: ಬುರ್ಖಾ ಧರಿಸಿಕೊಂಡು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಯುವಕನನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಈತ ನ್ಯಾಶನಲ್​ ಮಾರ್ಕೆಟ್ ಬಳಿ ಇರುವ ಟೈಟಾನ್​ ವಾಚ್​ ಶೋ ರೂಂ ಬಳಿ ಓಡಾಡುತ್ತಿದ್ದಾರೆ. 20 ಸಾವಿರ ರೂಪಾಯಿಯ ವಾಚ್​ನ್ನು ಕೂಡ ಖರೀದಿ ಮಾಡಿದ್ದಾನೆ. ಇನ್ನೂ ಆತನ ಬಳಿ 80 ಸಾವಿರ ರೂಪಾಯಿ ನಗದು ಇತ್ತು.

ಬುರ್ಖಾ ಧರಿಸಿಕೊಂಡು ವಾಚ್​ ಖರೀದಿ ಮಾಡಿದ ಈತನ ಹಾವಭಾವ ನೋಡಿದ ಶೋ ರೂಂ ಸಿಬ್ಬಂದಿ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಈತನನ್ನು ನೋಡಿ ಸಾರ್ವಜನಿಕರಿಗೂ ಗೊಂದಲವಾಗಿತ್ತು.

ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವಕನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಬುರ್ಖಾ ಧರಿಸಿ ಬಂದಿದ್ದೇಕೆ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.(ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net