ಕಾಡಾನೆಗಳಿಂದ ಭತ್ತದ ಸಸಿಮಡಿಗಳ ನಾಶ

5SPT1
ಸೋಮವಾರಪೇಟೆ ತಾಲೂಕಿನ ಗರ್ವಾಲೆ ಪಂಚಾಯಿತಿ ವ್ಯಾಪ್ತಿಯ ಸೂರ್ಲಬ್ಬಿ ಗ್ರಾಮದ ಉತ್ತಪ್ಪ, ಗಣಪತಿ ಅವರ ಭತ್ತದ ಸಸಿಮಡಿಯನ್ನು ಕಾಡಾನೆಗಳ ತಿಂದು, ತುಳಿದು ನಾಶ ಪಡಿಸಿವೆ.
Published on

ಸೋಮವಾರಪೇಟೆ: ಉತ್ತರ ಕೊಡಗಿನ ಗ್ರಾಮ ಸೂರ್ಲಬ್ಬಿಯಲ್ಲಿ ಕಾಡಾನೆಗಳ ಹಾವಳಿ ಪ್ರಾರಂಭವಾಗಿದ್ದು, ಗ್ರಾಮದ ರೈತರು ಸಿದ್ಧಪಡಿಸಿದ್ದ ಭತ್ತದ ಸಸಿಮಡಿಯನ್ನು ತುಳಿದು ನಾಶಪಡಿಸಿವೆ.

ಮುಟ್ಲು, ಹಮ್ಮಿಯಾಲ ಹಾಗೂ ಸೂರ್ಲಬ್ಬಿ ವ್ಯಾಪ್ತಿಯಲ್ಲಿ ಮೂರರಿಂದ ನಾಲ್ಕು ಕಾಡಾನೆಗಳು ಸಂಚರಿಸುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಪ್ರಸಕ್ತ ಸಾಲಿನಲ್ಲಿ ಈ ಭಾಗಕ್ಕೆ 100 ಇಂಚಿಗೂ ಅಧಿಕ ಮಳೆಯಾಗಿದ್ದು, ಗ್ರಾಮಸ್ಥರು ಭತ್ತದ ನಾಟಿ ಕೆಲಸಕ್ಕೆ ತಯಾರಿ ನಡೆಸಿದ್ದರು. ಸೂರ್ಲಬ್ಬಿ ಗ್ರಾಮದ ಅಪ್ಪುಡ ಉತ್ತಪ್ಪ, ಅಪ್ಪುಡ ಗಣಪತಿ ಅವರ ಗದ್ದೆಯಲ್ಲಿ ಬೆಳೆದು ನಿಂತಿದ್ದ ಸಸಿಮಡಿಯನ್ನು ಆನೆಗಳ ಹಿಂಡು ನಾಶ ಪಡಿಸಿದೆ.

ಕಳೆದ ಕೆಲ ದಿನಗಳಿಂದ ಕುಂಬಾರಗಡಿಗೆ, ಮಂಕ್ಯ, ಕಿಕ್ಕರಳ್ಳಿ ಗ್ರಾಮದಲ್ಲೂ ಆನೆಗಳ ದಾಳಿ ಮುಂದುವರಿದಿದ್ದು, ಅರಣ್ಯ ಇಲಾಖೆಗೆ ದೂರು ನೀಡಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಮಂಕ್ಯ ಗ್ರಾಮದ ಚಾಮೇರ ದಿನೇಶ್ ಬೆಳ್ಯಪ್ಪ ಪತ್ರಿಕೆಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net