ಕಾಡುಕೋಣಗಳಿಂದ ಭತ್ತದ ಸಸಿ ನಾಶ

Kadukona
Published on

ಸಿದ್ದಾಪುರ: ತಾಲೂಕಿನ ಜಾನಮನೆ ವಲಯ ಅರಣ್ಯ ವ್ಯಾಪ್ತಿಯ ಹೆಗ್ಗರಣಿ ಸಮೀಪದ ಕೆರೆಗದ್ದೆ ಸುತ್ತಮುತ್ತ ಭತ್ತ ನಾಟಿ ಮಾಡಿದ ಗದ್ದೆಗಳಿಗೆ ಕಾಡುಕೋಣಗಳು ಧಾವಿಸಿ ಬೆಳೆಯನ್ನು ನಾಶಪಡಿಸುತ್ತಿವೆ.

ಕೆರೆಗದ್ದೆಯ ವೆಂಕಟರಮಣ ಶಿವರಾಮ ಹೆಗಡೆ, ಗಣಪತಿ ವಿಶ್ವೇಶ್ವರ ಹೆಗಡೆ ಎಂಬುವವರ ಗದ್ದೆಗಳಿಗೆ ಏಳೆಂಟು ಕಾಡುಕೋಣಗಳ ಹಿಂಡು ದಾಳಿ ನಡೆಸಿ ಸುಮಾರು ಎರಡು ಎಕರೆ ಗದ್ದೆಯಲ್ಲಿ ನಾಟಿ ಮಾಡಿದ ಭತ್ತದ ಸಸಿಗಳನ್ನು ನಾಶಮಾಡಿವೆ.

ಕಳೆದ ಆರೇಳು ದಿನದಿಂದ ಗದ್ದೆಗಳಿಗೆ ದಾಳಿನಡೆಸುತ್ತಿರುವ ಕಾಡುಕೋಣಗಳನ್ನು ರಾತ್ರಿ ಓಡಿಸುವುದೇ ಆಗಿದೆ. ಆದರೆ ಪುನಃ ಗದ್ದೆಗಳಿಗೆ ಬರುತ್ತವೆ ಎಂದು ರೈತರು ತಿಳಿಸಿದ್ದಾರೆ. ಸಂಬಂಧ ಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಈ ಕುರಿತು ಗಮನ ಹರಿಸಿ ಕಾಡುಕೋಣಗಳನ್ನು ಅಡವಿಗೆ ಓಡಿಸುವುದಕ್ಕೆ ಮುಂದಾಗಬೇಕು ಹಾಗೂ ಬೆಳೆ ಹಾನಿ ವಿತರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net