ಮಾನವನ ದುರಾಸೆಗೆ ಪ್ರಕೃತಿಯ ವಿನಾಶ

07 NRGL 1
Published on

ನರೇಗಲ್ಲ: ಮಾನವನ ದುರಾಸೆ, ವೈಭವದ ಜೀವನದಿಂದ ಪ್ರಕೃತಿ ವಿನಾಶವಾಗುತ್ತಿದೆ. ನಾವು ಪ್ರಕೃತಿಯನ್ನು ಕಾಪಾಡಿಕೊಳ್ಳದಿದ್ದರೆ ಜೀವಿಗಳು ಅಪಾಯದ ಮಟ್ಟಕ್ಕೆ ಹೋಗುತ್ತವೆ ಎಂದು ಹಿರಿಯ ವೈದ್ಯ ಡಾ. ಆರ್.ಕೆ. ಗಚ್ಚಿನಮಠ ಹೇಳಿದರು.

ನರೇಗಲ್ಲ ಶ್ರೀ ಜಗದ್ಗುರು ಪಂಚಾಚಾರ್ಯ ಗ್ರಾಮಿಣಾಭಿವೃದ್ಧಿ ಶಿಕ್ಷಣ ಸಂಸ್ಥೆಯ ಶ್ರೀ ರೇಣುಕಾಚಾರ್ಯ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಜೀವಿಗಳ ಆಶ್ರಯ ತಾಣ ಭೂಮಿ, ಭೂಮಿಯ ಮಣ್ಣಿನ ಸತ್ವವನ್ನು ನಾವು ಕಾಪಾಡಿಕೊಳ್ಳದೆ ಹೋದರೆ ವಿನಾಶದ ಹಂತಕ್ಕೆ ತಲುಪುತ್ತೇವೆ. ಪ್ಲಾಸ್ಟಿಕ್ ಮಣ್ಣಿನಲ್ಲಿನ ಅನೇಕ ಜೀವ ಸತ್ವಗಳನ್ನು ನಾಶ ಮಾಡುತ್ತಿವೆ ಎಂದರು. ಮುಖ್ಯ ಶಿಕ್ಷಕಿ ಎನ್.ಎಸ್. ಹಿರೇಮಠ, ಅಕ್ಕಮ್ಮ ಬೆಟಗೇರಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net