ಮಾನವನಿಂದ ನೈಸರ್ಗಿಕ ಸಂಪನ್ಮೂಲ ನಾಶ

25 HBH 01
ಹಗರಿಬೊಮ್ಮನಹಳ್ಳಿ ತಾಲೂಕಿನ ನೆಲ್ಲುಕುದುರಿ ಗ್ರಾಮಕ್ಕೆ ಬುಧವಾರ ಪ್ರವೇಶಿಸಿದ ನಿರ್ಮಲ ತುಂಗಭದ್ರಾ ಅಭಿಯಾನ ಪಾದಯಾತ್ರೆಯನ್ನು ಸ್ವಾಗತಿಸಲಾಯಿತು.
Published on

ಹಗರಿಬೊಮ್ಮನಹಳ್ಳಿ: ಮಾನವ ಸಂಕುಲ ಸಂಕಷ್ಟದಲ್ಲಿದ್ದರೂ ನಮಗೆ ಅರಿವಿಲ್ಲದೆ ಮತ್ತಷ್ಟು ಅಪಾಯ ತಂದೊಡ್ಡಿಕೊಳ್ಳುತ್ತಿದ್ದೇವೆ ಎಂದು ನರಗುಂದ ಪಂಚಗ್ರಹ ಗುಡ್ಡ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು ಅಭಿಪ್ರಾಯಪಟ್ಟರು.

ತಾಲೂಕಿನ ನೆಲ್ಲುಕುದುರಿ ಗ್ರಾಮದಲ್ಲಿ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಮತ್ತು ಪರ್ಯಾವರಣ ಟ್ರಸ್ಟ್, ಜೆ.ಎಚ್.ಪಟೇಲ್ ಪ್ರತಿಷ್ಠಾನ ಮತ್ತು ರಾಣೆಬೆನ್ನೂರು, ವಿಜಯನಗರ, ಕೊಪ್ಪಳ ಜಿಲ್ಲಾ ವಿವಿಧ ತಾಲೂಕುಗಳ ನಾಗರಿಕರು ಹಾಗೂ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಆಗಮಿಸಿದ ನಿರ್ಮಲ ತುಂಗಭದ್ರಾ ಅಭಿಯಾನದ ಪಾದಯಾತ್ರೆಯಲ್ಲಿ ಬುಧವಾರ ಮಾತನಾಡಿದರು.

ನಿತ್ಯ ಜೀವನದಲ್ಲಿ ಪ್ರಕೃತಿಯೊಂದಿಗೆ ತಪ್ಪಾಗಿಯೇ ನಡೆದುಕೊಳ್ಳುತ್ತಿದ್ದೇವೆ. ಕಂಪನಿಗಳು, ಪ್ಯಾಕ್ಟರಿಗಳ ಕಲುಷಿತ ನೀರು, ತ್ಯಾಜ್ಯ ಬಿಡುವ ಮೂಲಕ ಪವಿತ್ರ ನದಿಯನ್ನು ವಿಷದ್ರವವನ್ನಾಗಿಸಿ ಪುನಃ ಸೇವಿಸುತ್ತಿದ್ದೇವೆ. ಇದು ಮನವಕುಲ ನಾಶಕ್ಕೆ ನೇರ ವಿಷಪ್ರಾಶನವಾಗಿದೆ. ಸರ್ಕಾರಗಳ ಕಟ್ಟುನಿಟ್ಟಿನ ಕ್ರಮ ಇಲ್ಲದಿರುವುದು ಸಹ ಇಂತಹ ಅನಾಹುತಕ್ಕೆ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಷ್ಟ್ರೀಯ ಸ್ವಾಭಿಮಾನ ದಕ್ಷಿಣ ಭಾರತದ ಸಂಚಾಲಕ ಸಿ.ಪಿ.ಮಾದವ ಮಾತನಾಡಿ, ಮೊದಲು ಉತ್ತರ ಭಾರತದಲ್ಲಿ ಆಂದೋಲನ ಮಾಡಿ, ಯಶಸ್ವಿಯಾದ ಬಳಿಕ ದಕ್ಷಿಣ ಭಾರತದಲ್ಲಿ ಅದೇ ಮಾದರಿಯನ್ನು ಕೈಗೊಳ್ಳಲಾಗಿದ್ದು, ಮಂತ್ರಾಲಯದವರೆಗೂ ಈ ಯಾತ್ರೆ ಕೈಗೊಳ್ಳುತ್ತೇವೆ ಎಂದರು.

ಹುಬ್ಬಳ್ಳಿಯ ವರದಾ ಶ್ರೀ ಪೌಂಡೇಷನ್ ಸಂಸ್ಥಾಪಕ ಮಲ್ಲಿಕಾರ್ಜುನ ರೆಡ್ಡಿ ಮಾತನಾಡಿದರು. ಬೆಂಗಳೂರಿನ ಚಂದ್ರಶೇಖರ್ ಸ್ವಾಮಿ, ಸುಮಾ ಮಾಧವ, ಶಿವಮೊಗ್ಗದ ಬಾಲಕೃಷ್ಣನಾಯ್ಡು, ಅಭಿಷೇಕ್, ರಾಧಾ ಬಾಲಕೃಷ್ಣ, ಶಾಂತಿ, ತೀರ್ಥಹಳ್ಳಿ ರಾಘವ ಗೋಶಿರಿ, ಹುಬಳ್ಳಿಯ ಡಿಶ್ ಬೀರಪ್ಪ, ಯಡಿಯೂರಿನ ಮೂಡ್ಲಪ್ಪ, ಸೂರ್ಯಪ್ರಕಾಶ, ತಾಲೂಕು ಸಂಚಾಲಕ ಎಚ್.ಎಂ.ನಾಗರಾಜ, ಈ.ಕೆ.ಮೂರ್ತಿ, ನಿವೃತ್ತ ಸೈನಿಕ ರಾಮರೆಡ್ಡಿ, ಕುಮಾರಸ್ವಾಮಿ, ಪ್ರಭಾಕರ ಕಲಾಲ್, ನಿವೃತ್ತ ಮುಖ್ಯ ಶಿಕ್ಷಕ ಮಲ್ಲೇಶಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net