70ಕ್ಕೂ ಹೆಚ್ಚು ತೆಂಗಿನ ಮರಗಳ ನಾಶ

3NUGGEHALLI
ಸಂತೆ ಶಿವರ ಗ್ರಾಮದ ಪುಟ್ಟಶೆಟ್ಟಿ ಎಂಬುವರ ಜಮೀನಿನಲ್ಲಿ ತೆಂಗಿನ ಮರಗಳನ್ನು ಕಡಿದು ಹಾಕಿರುವುದು.
Published on

ನುಗ್ಗೇಹಳ್ಳಿ: ಹೋಬಳಿಯ ಸಂತೆಶಿವರ ಗ್ರಾಮದ ನಿವಾಸಿ ಪುಟ್ಟಶೆಟ್ಟಿ ಎಂಬುವರ ಜಮೀನಿನಲ್ಲಿ ಫಲ ಬಿಡುವ ಹಂತದಲ್ಲಿದ್ದ 70ಕ್ಕೂ ಹೆಚ್ಚು ತೆಂಗಿನ ಮರಗಳನ್ನು ಶನಿವಾರ ದುಷ್ಕರ್ಮಿಗಳು ಕಡಿದು ಹಾಕಿದ್ದಾರೆ.

28 ಗುಂಟೆ ಪ್ರದೇಶದಲ್ಲಿ 6 ವರ್ಷಗಳ ಹಿಂದೆ ನೆಟ್ಟಿದ್ದ ತೆಂಗಿನ ಮರಗಳು ಫಸಲು ಬಿಡುವ ಹಂತದಲ್ಲಿದ್ದವು. ಆದರೆ ದುಷ್ಕರ್ಮಿಗಳು ಯಾರೂ ಇಲ್ಲದ ಸಮಯದಲ್ಲಿ ಮರಗಳನ್ನು ಕುಡಿದು ಹಾಕಿದ್ದಾರೆ ಎಂದು ಪುಟ್ಟಶೆಟ್ಟಿ ಅವರ ಪುತ್ರ ಕೃಷ್ಣಮೂರ್ತಿ ನುಗ್ಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net