

ಮುಂಡಗೋಡ: ತಾಲೂಕಿನ ಸನವಳ್ಳಿ ಗ್ರಾಮದ ಸನಿಹದ ಅಡಕೆ ತೋಟಕ್ಕೆ ಕಾಡು ಹಂದಿಗಳು ನುಗ್ಗಿ ಮೂವತ್ತಕ್ಕೂ ಹೆಚ್ಚು ಅಡಕೆ ಗಿಡಗಳನ್ನು ತಿಂದು, ತುಳಿದು ನಾಶ ಪಡಿಸಿದ ಘಟನೆ ಜರುಗಿದೆ.
ಸನವಳ್ಳಿ ಗ್ರಾಮದ ಅರಣ್ಯ ಅಂಚಿನಲ್ಲಿರುವ ಭೀಮಣ್ಣ ಬೈರಣ್ಣನವರಗೆ ಸೇರಿದ ಅಡಕೆ ತೋಟಕ್ಕೆ ನುಗ್ಗಿರುವ ಕಾಡು ಹಂದಿಗಳ ಹಿಂಡು ಮೂರು ವರ್ಷದ ಅಡಕೆ ಗಿಡಗಳನ್ನು ತಿಂದು, ತುಳಿದು ನಾಶ ಪಡಿಸಿವೆ. ಪ್ರತಿ ವರ್ಷವೂ ಕಾಡು ಹಂದಿಗಳು ಅಡಕೆ ಗಿಡಗಳನ್ನು ಹಾಳು ಮಾಡುತ್ತವೆ ಅರಣ್ಯ ಇಲಾಖೆಯ ಅಧಿಕಾರಿಗಳು ಶಾಶ್ವತ ಪರಿಹಾರ ದೊರಕಿಸುವುದು ಅವಶ್ಯವಿದೆ ಎಂಬ ಮಾತು ರೈತರದಾಗಿದೆ. ಸ್ಥಳಕ್ಕೆ ತೆರಳಿದ ಉಪವಲಯ ಅರಣ್ಯಾಧಿಕಾರಿ ಗೀರೀಶ ಕೋಳೆಕರ ಪರಿಶೀಲನೆ ನಡೆಸಿ ಪಂಚನಾಮೆ ಮಾಡಿದರು.