

ಹಾರೋಹಳ್ಳಿ : ನ್ಯಾಯಾಲಯದ ಆದೇಶದಂತೆ ರಾಮನಗರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದ ಮಾದಕ ವಸ್ತುಗಳನ್ನು ಪಟ್ಟಣದ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಜಿಲ್ಲಾ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ನಾಶಪಡಿಸಲಾಯಿತು.
13 ಪ್ರಕರಣಗಳ ಅಂದಾಜು 3 ಲಕ್ಷಕ್ಕೂ ಹೆಚ್ಚು ಮೌಲ್ಯದ 27 ಕೆ.ಜಿ. 828ಗ್ರಾಂ ಮಾದಕ ವಸ್ತುವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್‌ಗೌಡ ನೇತೃತ್ವದಲ್ಲಿ ಹಾರೋಹಳ್ಳಿ ಕೈಗಾರಿಕಾ ಕ್ಷೇತ್ರದ ಇ ನ್ಯಾನೊ ಇನ್ಸಿಂಟೆಚ್ ಘಟಕದ ಬರ್ನಿಂಗ್ ಸೆಂಟರ್‌ನಲ್ಲಿ ಗುರುವಾರ ನಾಶ ಮಾಡಲಾಯಿತು.ಎನ್‌ಡಿಪಿಎಸ್‌ಕಾಯ್ದೆಯಡಿ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 13 ಪ್ರಕರಣಗಳಲ್ಲಿ ಅಮಾನತುಪಡಿಸಿಕೊಂಡಿದ್ದ ಮಾದಕ ವಸ್ತುಗಳನ್ನು ತನಿಖೆ ಪೂರ್ಣಗೊಂಡಿದ್ದರಿಂದ ನ್ಯಾಯಾಲಯದ ಆದೇಶದ ಮೇರೆಗೆ ಜಿಲ್ಲಾ ಪೊಲೀಸರು ಪಂಚರ ಸಮಕ್ಷಮ ನಿಯಮಾನುಸಾರ ಮಾದಕ ವಸ್ತುಗಳನ್ನು
ನಾಶಪಡಿಸಿದರು. ಎಎಸ್ಪಿಗಳಾದ ಸುರೇಶ್, ರಾಮಚಂದ್ರಯ್ಯ, ಡಿವೈಎಸ್‌ಪಿಗಳಾದ
ದಿನಕರ್‌ಶೆಟ್ಟಿ, ಗಿರಿ, ಸರ್ಕಲ್ ಇನ್‌ಸ್ಪೆಕ್ಟರ್‌ಗಳಾದ ನವೀನ್, ಹಾರೋಹಳ್ಳಿ ಸರ್ಕಲ್ ಇನ್‌ಸ್ಪೆಕ್ಟರ್ ಕುಮಾರಸ್ವಾಮಿ, ಶಿವರಾಜು, ಕಾರ್ಖಾನೆ ಮಾಲೀಕ ಯೋಗಾನಂದ ಸೇರಿದಂತೆ ಹಲವರು ಇದ್ದರು.