ಅಡಕೆ, ತೆಂಗಿನ ಮರ ನಾಶ

IMG-20250104-WA0029
ಬೆಣಗಲು ಗ್ರಾಮದ ಗಣೇಶ್ ಅವರಿಗೆ ಸೇರಿದ ಜಮೀನಿನಲ್ಲಿ ತೆಂಗು, ಅಡಕೆ ಬೆಳೆ ನಾಶ ಮಾಡಿರುವುದು.
Published on

ಬೈಲಕುಪ್ಪೆ: ಸಮೀಪದ ಬೆಣಗಾಲು ಗ್ರಾಮದ ರೈತ ಬಿ.ಎಸ್.ಗಣೇಶ್ ಅವರಿಗೆ ಸೇರಿದ ಅಡಕೆ ಮತ್ತು ತೆಂಗಿನ ಮರಗಳನ್ನು ಕಿಡಿಗೇಡಿಗಳು ಶನಿವಾರ ಕಡಿದು ಹಾಕಿದ್ದಾರೆ.

ಪಿರಿಯಾಪಟ್ಟಣ ತಾಲೂಕಿನ ಚೆನ್ನಕಲ್ ಕಾವಲು ಗ್ರಾಮದ ಸರ್ವೇ ನಂ.30/42ಂ ರಲ್ಲಿನ 3.11ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಅಡಕೆ ಮತ್ತು ತೆಂಗು ಗಿಡಗಳನ್ನು ನಾಶ ಮಾಡಲಾಗಿದೆ.

ಗ್ರಾಮದ ರವಿನಾಯಕ ಸೇರಿದಂತೆ ಜಮೀನಿನಲ್ಲಿ ನಾಲ್ಕೈದು ಜನ ಮಚ್ಚಿನಿಂದ ಅಡಕೆ ಮತ್ತು ತೆಂಗಿನ ಸಸಿಗಳನ್ನು ಕಡಿಯುತ್ತಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಜಮೀನಿಗೆ ಹೋಗಿ ನೋಡುವಷ್ಟರಲ್ಲಿ ನನ್ನನ್ನು ನೋಡಿ ಗಾಬರಿಗೊಂಡು ಓಡಿ ಹೋಗಿದ್ದಾರೆ ಎಂದು ಬೈಲಕುಪ್ಪೆ ಪೊಲೀಸ್ ಠಾಣೆಗೆ ನೀಡಿರುವ ದೂರದಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ಎಎಸ್‌ಐ ಕುಮಾರ್ ಮತ್ತು ಸಿಬ್ಬಂದಿ ಸ್ಥಳ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net