ಕಾಡಾನೆಗಳಿಂದ ಕೃಷಿ ನಾಶ

elephant
ಕಾಡಾನೆ ದಾಳಿ ನಡೆಸಿ ಕೃಷಿ ಹಾನಿಗೊಳಿಸಿರುವುದು
Published on

ಸುಳ್ಯ: ಕಳೆದ ಮೂರ್ನಾಲ್ಕು ದಿನಗಳಿಂದ ತಾಲೂಕಿನ ಮಂಡೆಕೋಲು ಗ್ರಾಮದ ಕುದನಕೋಡಿ, ಕುಂಡಪಾರೆ, ಮಾವಜಿ ಹಾಗೂ ಪಂಜಿಕಲ್ಲು ಭಾಗದಲ್ಲಿ ಕಾಡಾನೆಗಳು ಬೀಡುಬಿಟ್ಟಿದ್ದು ರೈತರ ತೋಟಕ್ಕೆ ನುಗ್ಗಿ ಕೃಷಿ ಬೆಳೆಗಳನ್ನು ಧ್ವಂಸಗೈಯುತ್ತಿವೆ.

ಸತತ ಮೂರು ದಿನಗಳಿಂದ ಆನೆಗಳು ಕುಂಡಪಾರೆ, ಪಡ್ಪು ಭಾಗದಲ್ಲಿ ಹಾಗೂ ಕುದನಕೋಡಿ, ಮಾವಜಿ, ಪಂಜಿಕಲ್ಲು ಭಾಗದಲ್ಲಿ ತೋಟಕ್ಕೆ ನುಗ್ಗಿವೆ. ರಾತ್ರಿಯಾಗುತ್ತಿದ್ದಂತೆ ಘೀಳಿಡುತ್ತಾ ತೋಟಕ್ಕೆ ನುಗ್ಗುವ ಆನೆಗಳಿಂದಾಗಿ ರೈತರಿಗೆ ಕೃಷಿ ಬೆಳೆ ಹಾನಿಯ ಜತೆಗೆ ಜೀವಭಯವೂ ಕಾಡುತ್ತಲಿದೆ. ಶುಕ್ರವಾರ ರಾತ್ರಿ ವೇಳೆ ಪಡ್ಪು ಧನಂಜಯ, ದಿನಕರ ಹಾಗೂ ಸಂತೋಷ ಗೌಡ ಅವರ ತೋಟಕ್ಕೆ, ಪಂಜಿಕಲ್ಲಿನ ಯಶೋದಾ ಹಾಗೂ ಯೋಗೀಶ್ ಹಾಗೂ ಮಾವಜಿ ಮುದ್ದಪ್ಪ ಗೌಡ ಅವರ ತೋಟಕ್ಕೆ ನುಗ್ಗಿದ ಆನೆಗಳು ಅಪಾರ ಪ್ರಮಾಣದ ಕೃಷಿ ಬೆಳೆಗಳನ್ನು ಹಾನಿಗೊಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net