ಕಾಡು ಹಂದಿ ದಾಳಿಗೆ ಶುಂಠಿ ಬೆಳೆ ನಾಶ

17 gkp 01
Published on

ಗೋಣಿಕೊಪ್ಪ: ಧನುಗಾಲ ಗ್ರಾಮದಲ್ಲಿ ಬಿತ್ತನೆ ಮಾಡಿದ್ದ ಶುಂಠಿ ಬೆಳೆ ಕಾಡು ಹಂದಿ ದಾಳಿಗೆ ನಾಶವಾಗಿದ್ದು, 1 ಲಕ್ಷ ರೂ.ಗಳಿಗೂ ಹೆಚ್ಚು ನಷ್ಟವಾಗಿದೆ.

ಕೃಷಿಕ ಎಸ್.ಪಿ.ಜಗದೀಶ್ ಎಂಬುವರು ಅಂದಾಜು ಅರ್ಧ ಏಕರೆಯಷ್ಟು ಜಾಗದಲ್ಲಿ ಶುಂಟಿ ಕೃಷಿ ಮಾಡಿದ್ದರು. ಸೋಮವಾರ ರಾತ್ರಿ 15ಕ್ಕೂ ಹೆಚ್ಚು ಹಂದಿಗಳು ದಾಳಿ ಮಾಡಿ, ಬೆಳೆ ನಾಶ ಮಾಡಿವೆ. ಚಿಗುರು ಬಂದಿದ್ದ ಬೆಳೆ ಸಂಪೂರ್ಣ ನೆಲಕಚ್ಚಿದೆ. ಸುಮಾರು 60 ಚೀಲ ಶುಂಠಿ ಇಳುವರಿ ತೆಗೆಯುವ ಉತ್ಸಾಹದಲ್ಲಿದ್ದ ಕೃಷಿಕನಿಗೆ ನಿರಾಸೆ ಮೂಡಿಸಿದೆ.

ಈ ಸಂಬಂಧ ತಿತಿಮತಿ ವಲಯ ಅರಣ್ಯ ಇಲಾಖೆಗೆ ದೂರು ನೀಡಿದ್ದು, ಆರ್‌ಎಫ್‌ಒ ಅಶೋಕ್ ಪರಿಶೀಲಿಸಿ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net