ಕಾಡಾನೆಗಳ ದಾಳಿಗೆ ಬಾಳೆಗಿಡ ನಾಶ

20spt3
Published on

ಸೋಮವಾರಪೇಟೆ: ತಾಲೂಕಿನ ಯಡದಂಟೆ ಗ್ರಾಮದಲ್ಲಿ ಕಾಡಾನೆಗಳ ದಾಳಿಗೆ ಬಾಳೆಗಿಡಗಳು ನಾಶವಾಗಿದೆ.

ಗ್ರಾಮದ ನಿವಾಸಿ ಬಿ.ಎಂ.ಲವ ಎಂಬುವರ ಕಾಫಿ ತೋಟಕ್ಕೆ ಶುಕ್ರವಾರ ರಾತ್ರಿ ನುಗ್ಗಿರುವ ಕಾಡಾನೆಗಳು ಬಾಳೆಗಿಡಗಳನ್ನು ತುಳಿದು ತಿಂದಿವೆ. ಅಲ್ಲದೆ, ಕಾಲ್ತುಳಿತಕ್ಕೆ ಸಿಕ್ಕ ಕಾಫಿ ಗಿಡಗಳು ನಾಶವಾಗಿವೆ.

ಅನೇಕ ದಿನಗಳಿಂದ ಗ್ರಾಮದ ಸುತ್ತಮುತ್ತಲಿನ ಅರಣ್ಯ ಹಾಗೂ ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡುಬಿಟ್ಟಿದ್ದು, ಕಾಡಿಗಟ್ಟಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಲವ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net